ಜನ ಗಣ ಮನ ಅಂತಾ ನಮ್ಮ ರಾಷ್ಟ್ರಗೀತೆಯನ್ನು ಹಾಡುತ್ತಿದ್ದಂತೆ ಹೃದಯದಲ್ಲಿ ದೇಶಭಕ್ತಿಯ ಉತ್ಸಾಹ ತುಂಬುವುದರ ಜೊತೆಗೆ ಮೈಯೆಲ್ಲಾ ಪುಳಕಿತವಾಗುತ್ತದೆ. ಅದರಲ್ಲೂ ವಿದೇಶಿಯರು ನಮ್ಮ ರಾಷ್ಟ್ರಗೀತೆ ಹಾಡಿದರೆ ಅದಕ್ಕಿಂತ ಖುಷಿ, ರೋಮಾಂಚನ ಬೇರೆ ಯಾವುದೂ ಇಲ್ಲ.
ಹೌದು, ಇರಾನಿನ ಬಾಲಕಿಯೊಬ್ಬಳು ಭಾರತದ ರಾಷ್ಟ್ರಗೀತೆಯನ್ನು ಸಂಗೀತದ ಸಾಧನದಲ್ಲಿ ನುಡಿಸಿದ್ದು, ಸದ್ಯ ಭಾರಿ ವೈರಲ್ ಆಗಿದೆ. ಈ ವಿಡಿಯೋವನ್ನು ಐಎಫ್‌ಎಸ್ ಅಧಿಕಾರಿ ಸುಧಾ ರಾಮನ್ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಬಾಲಕಿಗೆ ಧನ್ಯವಾದವನ್ನು ತಿಳಿಸಿದ್ದಾರೆ. ಗುಲಾಬಿ ಬಣ್ಣದ ಉಡುಪು ತೊಟ್ಟಿರುವ ತಾರಾ ಘಹ್ರೆಮಣಿ ಎಂಬ ಬಾಲಕಿಯು ಸಂತೂರ್ ನಲ್ಲಿ ‘ಜನಗಣಮನ’ದ ರಾಗಗಳನ್ನು ನುಡಿಸಿದ್ದಾರೆ.
100 ರೂ. ಹೂಡಿಕೆಯೊಂದಿಗೆ ಭರ್ಜರಿ ಲಾಭ: ಅಂಚೆ ಇಲಾಖೆ ಮತ್ತೊಂದು ಸುರಕ್ಷಿತ ಯೋಜನೆ ಬಗ್ಗೆ ಇಲ್ಲಿದೆ ಮಾಹಿತಿ
ಭಾರತದ 72 ನೇ ಗಣರಾಜ್ಯೋತ್ಸವದಂದು ಘಹ್ರೆಮನಿ ಸುಮಧುರ ಸಂಗೀತದ ಭಾರತದ ರಾಷ್ಟ್ರಗೀತೆಯ ಟ್ಯೂನ್ ನ್ನು ತನ್ನ ಇನ್‌ಸ್ಟಾಗ್ರಾಮ್ ಅಪ್‌ಲೋಡ್ ಮಾಡಿದ್ದರು. “ಎಲ್ಲರಿಗೂ ನಮಸ್ಕಾರ.. ಇರಾನ್ ಹುಡುಗಿಯಾಗಿ ಹೇಳಲು ನನಗೆ ಅಂತಹ ಉತ್ತಮ ಅವಕಾಶ ನೀಡಿದಕ್ಕಾಗಿ ನಾನು ಕೃತಜ್ಞಳಾಗಿದ್ದೇನೆ. ನಾನು ಎಲ್ಲಾ ವೃತ್ತಿಪರ, ದಯೆ ಮತ್ತು ಶ್ರದ್ಧೆಯುಳ್ಳ ಭಾರತೀಯರನ್ನು ಪ್ರೀತಿಸುತ್ತೇನೆ ಮತ್ತು ನಾನು ನಿಮ್ಮ ಬೆಂಬಲವನ್ನು ಪ್ರಶಂಸಿಸುತ್ತೇನೆ, ನಿಮಗೆ ಶುಭವಾಗಲಿ. ಮತ್ತು ಈ ವಿಶೇಷ ದಿನದ ಶುಭಾಶಯಗಳು” ಎಂದು ಶೀರ್ಷಿಕೆ ನೀಡಿ ವಿಡಿಯೋ ಹಂಚಿಕೊಂಡಿದ್ದರು.
ಸದ್ಯ, ಬಾಲಕಿ ಸಂಗೀತ ಸಾಧನ ಸಂತೂರ್ ನಲ್ಲಿ ನುಡಿಸಿರುವ ನಮ್ಮ ರಾಷ್ಟ್ರಗೀತೆ ಕೇಳಿದ ಭಾರತೀಯರು ಪುಳಕಿತರಾಗಿದ್ದಾರೆ. ಅಲ್ಲದೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.