ಇರಾನ್‌ನ ರಾಷ್ಟ್ರೀಯ ಫುಟ್‌ಬಾಲ್ ತಂಡವು ಸೋಮವಾರ ಇಂಗ್ಲೆಂಡ್ ವಿರುದ್ಧದ ತಮ್ಮ ಆರಂಭಿಕ ವಿಶ್ವಕಪ್ ಪಂದ್ಯದ ಮೊದಲು ರಾಷ್ಟ್ರಗೀತೆ ಹಾಡದೇ ತಮ್ಮ ಪ್ರತಿರೋಧ ವ್ಯಕ್ತಪಡಿಸಿದ ಪ್ರಸಂಗ ನಡೆದಿದೆ.
ಖಲೀಫಾ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಗೀತೆ ಮೊಳಗುತ್ತಿದ್ದಂತೆ ಆರಂಭಿಕ 11 ಆಟಗಾರರು ಮೌನವಾಗಿದ್ದರು.
ಇರಾನ್ ರಾಜಧಾನಿ ಟೆಹರಾನ್‌ನಲ್ಲಿ ಹಿಜಾಬ್ ಧರಿಸದೇ ಇದ್ದಿದ್ದಕ್ಕೆ ಮಹ್ಸಾ ಅಮಿನಿ ಎಂಬಾಕೆಯನ್ನು ನೈತಿಕ ಪೊಲೀಸರು ಬಂಧಿಸಿದ್ದರು.
ಬಂಧನದ ವೇಳೆ ಮಹ್ಸಾ ಸಾವನ್ನಪ್ಪಿದ್ದಳು. ಈಕೆಗೆ ಮೇಲೆ ಹಲ್ಲೆ ನಡೆಸುತ್ತಿರುವ ವೀಡಿಯೋ ವೈರಲ್ ಆಗುತ್ತಿದ್ದಂತೆ ಇರಾನ್ ಸರ್ಕಾರದ ವಿರುದ್ಧ ಮಹಿಳೆಯರು, ಮಕ್ಕಳು ಬೀದಿಗೆ ಇಳಿದು ಹೋರಾಟ ಆರಂಭಿಸಿದ್ದರು.
ಈ ಹೋರಾಟಕ್ಕೆ ಈಗ ಮೂರು ತಿಂಗಳು ಕಳೆದಿವೆ. ಇರಾನ್‌ನಲ್ಲಿ ನಡೆಯುತ್ತಿರುವ ಹಿಜಾಬ್ ವಿರುದ್ಧದ ಪ್ರತಿಭಟನೆ ಬೆಂಬಲಿಸಿರುವ ಇರಾನ್ ಫುಟ್ಬಾಲ್ ತಂಡ ಈ ನಿರ್ಧಾರ ತೆಗೆದುಕೊಂಡಿದೆ.
ನಾವು ರಾಷ್ಟ್ರಗೀತೆ ಹಾಡದಿರಲು ನಿರ್ಧರಿಸಿದ್ದೇವೆ. ಇರಾನ್‌ನಲ್ಲಿ ನಡೆಯತ್ತಿರುವ ಪ್ರತಿಭಟನೆ ಬೆಂಬಲಿಸಿ ಈ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ಇರಾನ್ ಫುಟ್ಬಾಲ್ ತಂಡದ ನಾಯಕ ಅಲಿರೆಜಾ ಜಹಾನ್‌ಬಕ್ಷ್ ಹೇಳಿದ್ದಾರೆ.