
ಬೆಂಗಳೂರು: ರಾಮನಗರ ಎಸ್.ಪಿ. ಗಿರೀಶ್ ಸೇರಿದಂತೆ ನಾಲ್ವರು ಐಪಿಎಸ್ ಅಧಿಕಾರಿಗಳನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ. ಎಸ್. ಗಿರೀಶ್ ಅವರನ್ನು ವೈಟ್ಫೀಲ್ಡ್ ಡಿಸಿಪಿಯಾಗಿ ವರ್ಗಾವಣೆ ಮಾಡಲಾಗಿದೆ.
ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಪೊಲೀಸ್ ಅಧೀಕ್ಷಕ ಕೆ. ಪರಶುರಾಮ್ ಅವರನ್ನು ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ವರ್ಗಾವಣೆ ಮಾಡಲಾಗಿದೆ.
ಚಿತ್ರದುರ್ಗ ಜಿಲ್ಲಾ ಎಸ್ಪಿ ಆಗಿದ್ದ ಜಿ. ರಾಧಿಕಾ ಅವರನ್ನು ಬಿಎಂಟಿಸಿ ಸೆಕ್ಯೂರಿಟಿ ವಿಜಿಲೆನ್ಸ್ ವಿಭಾಗದ ನಿರ್ದೇಶಕರಾಗಿ ವರ್ಗಾವಣೆ ಮಾಡಲಾಗಿದೆ.
ಗುಪ್ತಚರ ಡಿಸಿಪಿ ಕೆ. ಸಂತೋಷ್ ಬಾಬು ಅವರನ್ನು ರಾಮನಗರ ಎಸ್ಪಿಯಾಗಿ ವರ್ಗಾವಣೆ ಮಾಡಲಾಗಿದೆ.