ಬೆಂಗಳೂರು: ರಾಜ್ಯ ಸರ್ಕಾರ ಮತ್ತೆ ಮೂವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ.
ಪ್ರವೀಣ್ ಪವಾರ್ ಮಧುಕರ್ ಅವರನ್ನು ಮೈಸೂರು ಕೆಪಿಎ ನಿರ್ದೇಶಕರಾಗಿ ವರ್ಗಾವಣೆ ಮಾಡಲಾಗಿದೆ. ದಾವಣಗೆರೆ ಪೂರ್ವವಲಯ ಐಜಿಪಿಯಾಗಿ ಕೆ. ತ್ಯಾಗರಾಜನ್ ಹಾಗೂ ಕೊಡಗು ಪೊಲೀಸ್ ವರಿಷ್ಠಾಧಿಕಾರಿಯಾಗಿ ಎಂ.ಎ. ಅಯ್ಯಪ್ಪ ಅವರನ್ನು ವರ್ಗಾವಣೆ ಮಾಡಲಾಗಿದೆ.