alex Certify ಜನ್ಮಾಷ್ಟಮಿಯಂದು‌ ಮೊಸರು ಕುಡಿಕೆ ಒಡೆದ ಹಿರಿಯ ಮಹಿಳೆ; ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜನ್ಮಾಷ್ಟಮಿಯಂದು‌ ಮೊಸರು ಕುಡಿಕೆ ಒಡೆದ ಹಿರಿಯ ಮಹಿಳೆ; ವಿಡಿಯೋ ವೈರಲ್

ಈ ಸಾಲಿನ ಜನ್ಮಾಷ್ಟಮಿ ಮುಗಿದಿರಬಹುದು, ಆದರೆ ಜನರು ಅದನ್ನು ಉತ್ಸಾಹದಿಂದ ಆಚರಿಸುವ ವಿಡಿಯೊಗಳು ಇನ್ನೂ ಆನ್​ಲೈನ್​ನಲ್ಲಿ ಕಾಣಿಸಿಕೊಳ್ಳುತ್ತಿವೆ. ಅಂತಹ ಒಂದು ಕ್ಲಿಪ್​ ಹೆಚ್ಚಿನ ಜನರ ಗಮನವನ್ನು ಸೆಳೆಯುತ್ತಿದೆ.

ಇದನ್ನು ಐಪಿಎಸ್​ ಅಧಿಕಾರಿ ದೀಪಾಂಶು ಕಬ್ರಾ ಅವರು ಹಂಚಿಕೊಂಡಿದ್ದಾರೆ. ಮೊಸರು ಕುಡಿಕೆ ಕಾರ್ಯಕ್ರಮದಲ್ಲಿ ಹಿರಿಯ ಮಹಿಳೆ ಭಾಗವಹಿಸಿದ್ದು, ಮಹಿಳೆಯರೆಲ್ಲ ಮಾನವ ಪಿರಮಿಡ್​ ಮಾಡಿದ್ದು, ಅದರ ಮೇಲೆ ಹತ್ತಿ ಮಣ್ಣಿನ ಮಡಕೆಯನ್ನು ಒಡೆದ ರೀತಿ ತುಂಬಾ ಶ್ಲಾಘನೀಯವಾಗಿದೆ, ನೀವು ಇದನ್ನು ಖಂಡಿತವಾಗಿ ಗಮನಿಸಿ ಎಂದು ಅವರು ಶೀರ್ಷಿಕೆ ನೀಡಿದ್ದಾರೆ.

45 ಸೆಕೆಂಡುಗಳ ಕ್ಲಿಪ್​ನಲ್ಲಿ, ಹಳದಿ ಸೀರೆಯನ್ನು ಧರಿಸಿದ ವಯಸ್ಸಾದ ಮಹಿಳೆ ಮಾನವ ಪಿರಮಿಡ್​ ಅನ್ನು ಹತ್ತುತ್ತಿರುವುದು ರೋಮಾಂಚಕಾರಿಯಾಗಿ ಕಾಣಿಸಿದೆ. ಆಕೆ ನಿಧಾನವಾಗಿ ಮೇಲಕ್ಕೆ ಹತ್ತಿ ಮಣ್ಣಿನ ಮಡಕೆಯನ್ನು ಹಿಡಿದು ಉತ್ಸಾಹದಿಂದ ಅದನ್ನು ಒಡೆಯಲು ಮುಂದಾದಾಗ ಇತರ ಮಹಿಳೆಯರು ಹಷೋರ್ದ್ಗಾರ ಮಾಡುತ್ತಿದ್ದರು. ಅವರೆಲ್ಲರೂ ನಂತರ  ಸಂಭ್ರಮದಿಂದ ನೃತ್ಯ ಮಾಡಿದ್ದು ವಿಡಿಯೋದಲ್ಲಿದೆ.

ಶೇರ್​ ಆಗಿರುವ ವಿಡಿಯೋ ವೇಗವಾಗಿ ಜನಾಕರ್ಷಣೆ ಪಡೆದಿದೆ. ನೆಟ್ಟಿಗರು ವಯಸ್ಸಾದ ಮಹಿಳೆಯ ಸಂಭ್ರಮಕ್ಕೆ ಬೌಲ್ಡ್​ ಆಗಿದ್ದಾರೆ, ಕಾಮೆಂಟ್​ಗಳ ವಿಭಾಗದಲ್ಲಿ ತಮ್ಮ ಪ್ರೀತಿಯನ್ನು ಸುರಿಸಿದ್ದಾರೆ.

https://twitter.com/Silent_life98/status/1560966673229787136?ref_src=twsrc%5Etfw%7Ctwcamp%5Etweetembed%7Ctwterm%5E1560966673229787136%7Ctwgr%5E947241e1d014fd4a0a10bc4ec10e0badb13892c3%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fips-officer-shares-video-of-elderly-woman-participating-in-dahi-handi-event-star-dadi-says-internet-1990439-2022-08-20

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...