
ಬೆಂಗಳೂರು: ಐಪಿಎಸ್ ಅಧಿಕಾರಿ ರೂಪಾ ಮೌದ್ಗಿಲ್ ವಿರುದ್ಧ ಎಫ್ಐಆರ್ ದಾಖಲಿಸಲು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಪಟ್ಟು ಹಿಡಿದಿದ್ದು, ಪೊಲೀಸ್ ಆಯುಕ್ತರಿಗೆ ಮತ್ತೆ ಪತ್ರ ಬರೆದಿದ್ದಾರೆ.
ದೂರು ನೀಡಿದ್ದರೂ ಎಫ್ಐಆರ್ ದಾಖಲಿಸಿಲ್ಲವೆಂದು ರೋಹಿಣಿ ಸಿಂಧೂರಿ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಐಟಿ ಕಾಯ್ದೆ, ಐಪಿಸಿ ವಿವಿಧ ಸೆಕ್ಷನ್ ಗಳ ಅಡಿ ಎಫ್ಐಆರ್ ದಾಖಲಿಸಲು ಮನವಿ ಮಾಡಿದ್ದಾರೆ.
ಫೇಸ್ಬುಕ್ ನಲ್ಲಿ ರೂಪಾ ಅವರು ಮಾನಹಾನಿಕರ ಹೇಳಿಕೆ ನೀಡಿದ್ದಾರೆ. ಖಾಸಗಿ ಫೋಟೋಗಳು, ಸ್ಕ್ರೀನ್ ಶಾಟ್ ಗಳನ್ನು ಹಾಕಿದ್ದಾರೆ. ಫೋಟೋಗಳನ್ನು ತಿರುಚಿ ಪೋಸ್ಟ್ ಮಾಡಲಾಗಿದೆ. ವೃತ್ತಿ ಮಾತ್ಸರ್ಯದಿಂದ ರೂಪಾ ಮೌದ್ಗಿಲ್ ಪೋಸ್ಟ್ ಮಾಡಿದ್ದಾರೆ. ಈ ಬಗ್ಗೆ ಬಾಗಲಗುಂಟೆ ಠಾಣೆ ಪೊಲೀಸರಿಗೆ ದೂರು ನೀಡಿದ್ದೇನೆ. ಆದರೆ, ಪೊಲೀಸರು ಈ ಬಗ್ಗೆ ತನಿಖೆಯನ್ನು ನಡೆಸಿಲ್ಲ. ರೂಪಾ ಅವರು ಐಜಿಪಿ ರ್ಯಾಂಕ್ ನಲ್ಲಿರುವ ಪವರ್ ಫುಲ್ ಅಧಿಕಾರಿಯಾಗಿದ್ದಾರೆ. ಹೀಗಾಗಿಯೇ ಪೊಲೀಸರು ತನಿಖೆ ಆರಂಭಿಸಿಲ್ಲವೆಂದು ರೋಹಿಣಿ ಸಿಂಧೂರಿ ಪೊಲೀಸ್ ಆಯುಕ್ತರಿಗೆ ಪತ್ರ ಬರೆದು ದೂರಿದ್ದು, ಎಫ್ಐಆರ್ ದಾಖಲಿಸಲು ಮನವಿ ಮಾಡಿದ್ದಾರೆ.