ತಮ್ಮ ಅಭಿನಯದ ’ಸೂರ್ಯವಂಶಿ’ ಚಿತ್ರದ ಸೆಟ್‌ನಿಂದ ಕೆಲವೊಂದು ಚಿತ್ರಗಳನ್ನು ಶೇರ್ ಮಾಡಿಕೊಂಡ ಅಕ್ಷಯ್ ಕುಮಾರ್‌ಗೆ ಐಪಿಎಸ್ ಅಧಿಕಾರಿಯೊಬ್ಬರು ಚಿತ್ರದ ದೃಶ್ಯವೊಂದರ ಕಾಂಪೋಸಿಂಗ್‌ನಲ್ಲಿ ಆದ ಪ್ರಮಾದವೊಂದರ ಬಗ್ಗೆ ವಿವರಿಸಿದ್ದಾರೆ.
ಪೊಲೀಸ್ ಕಥೆ ಇರುವ ಈ ಚಿತ್ರವನ್ನು ರೋಹಿತ್ ಶೆಟ್ಟಿ ನಿರ್ದೇಶಿಸುತ್ತಿದ್ದು, ಈ ವರ್ಷದ ದೀಪಾವಳಿ ವೇಳೆಗೆ ಬಿಡುಗಡೆಯಾಗಲಿದೆ.
ಅಕ್ಷಯ್ ಶೇರ್ ಮಾಡಿರುವ ತೆರೆಯ ಹಿಂದಿನ ಚಿತ್ರವೊಂದರಲ್ಲಿ, ಕಿಲಾಡಿ ಖ್ಯಾತಿಯ ನಟ ಪೊಲೀಸ್ ಸಮವಸ್ತ್ರದಲ್ಲಿದ್ದು, ರಣವೀರ್ ಸಿಂಗ್ ಹಾಗೂ ಅಜಯ್ ದೇವಗನ್ ಹಾಗೂ ನಿರ್ದೇಶಕ ರೋಹಿತ್ ಶೆಟ್ಟಿ ಜೊತೆಗೆ ಸಮಾಲೋಚನೆ ನಡೆಸುತ್ತಿರುವುದನ್ನುನೋಡಬಹುದಾಗಿದೆ.
BIG NEWS: ಕೃಷಿ ಕಾಯ್ದೆ ವಿರೋಧಿಸುವವರು ಮೂಲ ಉದ್ದೇಶ ಅರ್ಥೈಸಿಕೊಂಡಿದ್ದಾರಾ….? ಸಚಿವ ಕೋಟಾ ಶ್ರೀನಿವಾಸ್ ಪ್ರಶ್ನೆ
“ಬಹಳ ಕುಟುಂಬಗಳು ಇಂದು ಉದ್ಧವ್ ಠಾಕರೆಗೆ ಥ್ಯಾಂಕ್ಸ್ ಹೇಳಲಿವೆ! ಅಕ್ಟೋಬರ್ 22ರಿಂದ ಮಹಾರಾಷ್ಟ್ರದಲ್ಲಿ ಸಿನೆಮಾ ಹಾಲ್‌ಗಳನ್ನು ಮರು ಆರಂಭ ಮಾಡಲು ಅನುಮತಿ ಕೊಟ್ಟಿದ್ದಕ್ಕೆ ಧನ್ಯವಾದಗಳು. ಈಗ ಪೊಲೀಸ್ ಬರುತ್ತಿದ್ದಾನೆ #ಸೂರ್ಯವಂಶಿ #ದೀಪಾವಳಿ2021,” ಎಂದು ಅಕ್ಷಯ್ ಪೋಸ್ಟ್ ಮಾಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಐಪಿಎಸ್ ಅಧಿಕಾರಿ ಆರ್.ಕೆ ವಿಜ್, “ಇನ್ಸ್‌ಪೆಕ್ಟರ್ ಸಾಹೇಬರು ಕುಳಿತಿದ್ದಾರೆ ಮತ್ತು ಎಸ್‌ಪಿ ಸಾಹೇಬರು ನಿಂತಿದ್ದಾರೆ, ಹೀಗೆ ಆಗೋದಿಲ್ಲ ಜನಾಬ್,” ಎಂದು ವಿನೋದಮಯವಾದ ಪ್ರತಿಕ್ರಿಯೆಯೊಂದನ್ನು ಅಕ್ಷಯ್ ಕುಮಾರ್‌ರ ಟ್ವೀಟ್‌ಗೆ ನೀಡಿದ್ದಾರೆ.
ಸಿಂಬಾದಲ್ಲಿ ರಣವೀರ್‌ರ ಪಾತ್ರ, ಸಿಂಗಮ್‌ನಲ್ಲಿ ಅಜಯ್ ದೇವಗನ್‌ರ ಪಾತ್ರ ಹಾಗೂ ಸೂರ್ಯವಂಶಿಯಲ್ಲಿ ಅಕ್ಷಯ್‌ರ ಪಾತ್ರಗಳ ತುಲನೆಯಲ್ಲಿ ವಿಜ್ ಹೀಗೊಂದು ಫನ್ನಿ ಟ್ವೀಟ್ ಮಾಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಅಕ್ಷಯ್, “ಸರ್, ಇದು ತೆರೆಯ ಹಿಂದಿನ ಚಿತ್ರವಷ್ಟೇ. ನಮ್ಮಂಥ ನಟರಿಗೆ ಕ್ಯಾಮೆರಾ ಆನ್ ಆಗುತ್ತಲೇ ನಿಯಮಗಳನ್ನು ಪಾಲಿಸಬೇಕು. ನಮ್ಮ ಪೊಲೀಸ್ ಪಡೆಗಳಿಗೆ ಗೌರವ ನಮನಗಳೊಂದಿಗೆ, ವೀಕ್ಷಿಸಿದ ಬಳಿಕ ಚಿತ್ರ ನಿಮಗೆ ಇಷ್ಟವಾಗುತ್ತದೆ ಎಂಬ ಭರವಸೆ ಇದೆ,” ಎಂದು ತಿಳಿಸಿದ್ದಾರೆ.