
ಹೀಗೆ ನವರಾತ್ರಿ ಉಪವಾಸದಲ್ಲಿರುವ ಹಿರಿಯ ಐಪಿಎಸ್ ಅಧಿಕಾರಿ ಅರುಣ್ ಮಲ್ಹೋತ್ರಾ ಇಂಡಿಗೋ ವಿಮಾನದಲ್ಲಿ ತಮ್ಮನ್ನು ಉಪಚರಿಸಿದ ಬಗೆಯನ್ನು ಶ್ಲಾಘಿಸಿದ್ದಾರೆ. ತಾವು ಉಪವಾಸದಲ್ಲಿರುವ ಕುರಿತು ಫ್ಲೈಟ್ ಸಿಬ್ಬಂದಿಗೆ ಹೇಳಿದ ಬಳಿಕ ಅವರು ವೃತಕ್ಕೆ ಅನುಗುಣವಾದ ಆಹಾರವನ್ನೇ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.
ಅರುಣ್ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಫೋಟೋವನ್ನ ಶೇರ್ ಮಾಡಿದ್ದಾರೆ. ಇಂಡಿಗೋ ಫ್ಲೈಟ್ ಅಟೆಂಡೆಂಟ್ ಪೂರ್ವಿ ತಮಗೆ ಒಂದು ಕಪ್ ಚಹಾ, ಸಾಬುದಾನ ಚಿಪ್ಸ್ ಹಾಗೂ ಚಿಕ್ಕಿಯನ್ನು ನೀಡೋದ್ರ ಜೊತೆಯಲ್ಲಿ ಸಣ್ಣ ಪತ್ರವನ್ನೂ ಕೊಟ್ಟಿದ್ದರು. ಇದರಲ್ಲಿ ಮಿ. ಬೋಥ್ರಾ ಅವರೇ, ಇಂದು ನೀವು ನಮ್ಮೊಂದಿಗೆ ಬಂದಿರೋದು ನಮಗೆ ಸಂತೋಷ ತಂದಿದೆ. ನವದುರ್ಗೆಯವರು ನಿಮಗೆ ಸಮೃದ್ಧಿ ನೀಡಲಿ ಅಂತಾ ಬರೆದಿದ್ದಾರೆ.
ಈ ತಿಂಡಿಗಳಿಗೆ ಐಪಿಎಸ್ ಅಧಿಕಾರಿ ಹಣ ಪಾವತಿ ಮಾಡಲು ಹೋದಾಗ ಪೂರ್ವಿ ಹಣ ಸ್ವೀಕರಿಸಲು ನಿರಾಕರಿಸಿದ್ದಾರೆ ಹಾಗೂ ತಾವೂ ನವರಾತ್ರಿ ವೃತದಲ್ಲಿ ಇರೋದಾಗಿ ಹೇಳಿದ್ದಾರೆ. ಹೀಗಾಗಿ ನೀವು ಹಣ ಕೊಡುವ ಅಗತ್ಯವಿಲ್ಲ ಎಂದಿದ್ದಾರೆ. ದೇವರು ಯಾವುದೋ ಯಾವುದೋ ರೂಪದಲ್ಲಿ ನಮ್ಮೆದುರು ಬರುತ್ತಾನಂತೆ. ಇಂದು ಆ ದೇವಿ ಪೂರ್ವಿ ರೂಪದಲ್ಲಿ ಬಂದಿರಬಹುದು ಅಂತಾ ಅರುಣ್ ಬರೆದುಕೊಂಡಿದ್ದಾರೆ.