ಐಪಿಎಲ್ 2022ರ ಮೇಲೆ ಎಲ್ಲರ ಕಣ್ಣಿದೆ. ಅದಕ್ಕೂ ಮುನ್ನ ನಡೆಯಲಿರುವ ಹರಾಜಿನ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ವಿಶ್ವದಲ್ಲೇ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಲೀಗ್ ಐಪಿಎಲ್ ಆಗಿದ್ದು, ಆರ್ ಸಿ ಬಿ ವೀಕ್ಷಕರ ಸಂಖ್ಯೆಯೂ ಸಾಕಷ್ಟಿದೆ. ಆರ್ಸಿಬಿ, ವಿರಾಟ್ ಕೊಹ್ಲಿ ಹೊರತುಪಡಿಸಿ ಮತ್ತ್ಯಾವ ಆಟಗಾರರನ್ನು ಉಳಿಸಿಕೊಳ್ಳಲಿದೆ ಎಂಬ ನಿರೀಕ್ಷೆ ಎಲ್ಲರಿಗೂ ಇದೆ. ಇದೀಗ ವಿರಾಟ್ ಕೊಹ್ಲಿ ಹಾಗೂ ಗ್ಲೆನ್ ಮ್ಯಾಕ್ಸ್ ವೆಲ್ ಹೊರತಾಗಿ ಇನ್ನೊಬ್ಬ ಆಟಗಾರ ಆರ್ ಸಿ ಬಿ ಸೇರಿಸಿಕೊಂಡಿರುವುದು ಸ್ಪಷ್ಟವಾಗಿದೆ.
ಬೌಲರ್ ಮೊಹಮ್ಮದ್ ಸಿರಾಜ್, ವಿರಾಟ್ ಕೊಹ್ಲಿ ಮತ್ತು ಆಸ್ಟ್ರೇಲಿಯಾದ ಬ್ಯಾಟ್ಸ್ ಮನ್ ಗ್ಲೆನ್ ಮ್ಯಾಕ್ಸ್ ವೆಲ್ ಜೊತೆಯಾಗಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಸಿರಾಜ್ ಆರ್‌ಸಿಬಿ ಪರ ಆಟವಾಡ್ತಿದ್ದಾರೆ. 2018ರಲ್ಲಿ ಸಿರಾಜ್, ಆರ್‌ಸಿಬಿ ತಂಡ ಸೇರಿದ್ದರು. ಐಪಿಎಲ್ 2021 ರಲ್ಲಿ ಸಿರಾಜ್ 15 ಪಂದ್ಯಗಳಲ್ಲಿ 11 ವಿಕೆಟ್ ಪಡೆದಿದ್ದಾರೆ.
ಐಪಿಎಲ್ ಮೆಗಾ ಹರಾಜಿಗೆ ಮುನ್ನ ಪ್ರಾಂಚೈಸಿಗಳು ನಾಲ್ಕು ಆಟಗಾರರನ್ನು ಉಳಿಸಿಕೊಳ್ಳಬಹುದು. ಈಗ ಮೂವರ ಹೆಸರು ಹೊರ ಬಿದ್ದಿದೆ. ನಾಲ್ಕನೇ ಆಟಗಾರ ಯಾರು ಎಂಬ ಪ್ರಶ್ನೆ ಕಾಡ್ತಿದೆ. ನಾಲ್ಕನೇ ಸ್ಥಾನಕ್ಕೆ ಸ್ಪರ್ಧೆಯಿದೆ. ದೇವದತ್ ಪಡಿಕ್ಕಲ್ ಅದ್ಭುತ ಆಟ ಪ್ರದರ್ಶಿಸಿದ್ದಾರೆ. ಭಾರತದ ಸ್ಟಾರ್ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ಕೂಡ ಸರದಿ ಸಾಲಿನಲ್ಲಿದ್ದಾರೆ. ಹರ್ಷಲ್ ಪಟೇಲ್ ಕೂಡ ಸ್ಪರ್ಧೆಯಲ್ಲಿದ್ದಾರೆ.
ವಿರಾಟ್ ಕೊಹ್ಲಿ ಐಪಿಎಲ್ 2021 ರಲ್ಲಿ ಆರ್ಸಿಬಿ ನಾಯಕತ್ವ ಬಿಡುವುದಾಗಿ ಘೋಷಿಸಿದ್ದಾರೆ. ಕೊಹ್ಲಿ ನಾಯಕತ್ವದಲ್ಲಿ ಆರ್‌ಸಿಬಿ ಒಂದೇ ಒಂದು ಐಪಿಎಲ್ ಟ್ರೋಫಿ ಪಡೆದಿಲ್ಲ. ಹರಾಜಿನಲ್ಲಿ, ನಾಯಕನ ಹುಡುಕಾಟ ನಡೆಯಲಿದೆ. ಶ್ರೇಯಸ್ ಅಯ್ಯರ್ ಮತ್ತು ಕೆಎಲ್ ರಾಹುಲ್ ಮೇಲೆ ಕಣ್ಣಿದೆ. ಯಾರು ಆರ್ಸಿಬಿ ನಾಯಕರಾಗಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.