ರಿಲಯನ್ಸ್ ಕನ್ಸ್ಯೂಮರ್ ಪ್ರಾಡಕ್ಟ್ಸ್ ಲಿಮಿಟೆಡ್ (ಆರ್‌ಸಿಪಿಎಲ್) ಬ್ರಾಂಡ್ ಆಗಿರುವ ಕ್ಯಾಂಪಾ, ಟಿವಿ ಮತ್ತು ಡಿಜಿಟಲ್ ಪ್ಲಾಟ್‌ಫಾರಂಗಳಿಗೆ ಐಪಿಎಲ್ 2025 ರ ‘ಸಹ-ಪ್ರಾಯೋಜಕ’ ಆಗಲಿದೆ. ಈ ಸಂಬಂಧ ಜಿಯೋ ಸ್ಟಾರ್‌ನೊಂದಿಗೆ ಪಾಲುದಾರಿಕೆ ಮಾಡಿಕೊಂಡಿದೆ.
ದೇಶದಲ್ಲಿ ಅತಿ ಹೆಚ್ಚು ವೀಕ್ಷಿಸಿದ ಕ್ರೀಡಾ ಕಾರ್ಯಕ್ರಮವಾದ ಐಪಿಎಲ್ ಜಿಯೋಸ್ಟಾರ್‌ನಲ್ಲಿ ಪ್ರಸಾರವಾಗಲಿದೆ. ಈ ಸಹಭಾಗಿತ್ವವು ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್‌ನ ಪ್ರಾದೇಶಿಕ ಭಾಷಾ ಪ್ರಸಾರವನ್ನು ಸಹ ಒಳಗೊಂಡಿದೆ. ಇದು ಕ್ಯಾಂಪಾ ಬ್ರಾಂಡ್‌ನ ವ್ಯಾಪ್ತಿಯನ್ನು ಹೆಚ್ಚಿಸಲಿದೆ.
ರಿಲಯನ್ಸ್ ಕನ್ಸ್ಯೂಮರ್ ಪ್ರಾಡಕ್ಟ್ಸ್ ಲಿಮಿಟೆಡ್‌ನ ಸಿಒಒ ಕೇತನ್ ಮೋದಿ, ‘ಐಪಿಎಲ್‌ಗಾಗಿ ಜಿಯೋಸ್ಟಾರ್ ಜೊತೆಗಿನ ನಮ್ಮ ಪಾಲುದಾರಿಕೆಯು ಕ್ರಿಕೆಟ್‌ಗೆ ಇರುವ ನಮ್ಮ ಬದ್ಧತೆಯ ಸಾಕ್ಷಿಯಾಗಿದೆ. ಟಿವಿ ಮತ್ತು ಡಿಜಿಟಲ್ ನಲ್ಲಿ ‘ಸಹ-ಚಾಲಿತ ಪ್ರಾಯೋಜಕತ್ವ’ವನ್ನು ಪಡೆಯುವ ಮೂಲಕ, ನಾವು ಭಾರತದ ಅತಿದೊಡ್ಡ ವೇದಿಕೆಯಲ್ಲಿ ನಮ್ಮ ಉಪಸ್ಥಿತಿಯನ್ನು ವಿಸ್ತರಿಸುತ್ತಿದ್ದೇವೆ. ಈ ಸಹಯೋಗವು ಕ್ಯಾಂಪಾದ ವ್ಯಾಪ್ತಿಯನ್ನು ಹೆಚ್ಚಿಸುತ್ತದೆ. ಇದು ಲಕ್ಷಾಂತರ ಕ್ರಿಕೆಟ್ ಅಭಿಮಾನಿಗಳೊಂದಿಗೆ ನೇರವಾಗಿ ಸಂಪರ್ಕ ಸಾಧಿಸುವ ಅವಕಾಶವನ್ನು ಒದಗಿಸುತ್ತದೆ’ ಎಂದರು.
ಜಿಯೋಸ್ಟಾರ್‌ನ ಕ್ರೀಡಾ ಆದಾಯದ ವ್ಯವಹಾರ ಮುಖ್ಯಸ್ಥ ಇಶಾನ್ ಚಟರ್ಜಿ ಮಾತನಾಡಿ, ‘ಐಪಿಎಲ್‌ಗೆ ಪ್ರಮುಖ ಪ್ರಾಯೋಜಕರಾಗಿ ಕ್ಯಾಂಪಾವನ್ನು ಸ್ವಾಗತಿಸಲು ನಾವು ಉತ್ಸುಕರಾಗಿದ್ದೇವೆ. ಈ ಪಾಲುದಾರಿಕೆಯು ದೇಶದ ಅತಿದೊಡ್ಡ ಕ್ರಿಕೆಟ್ ಪಂದ್ಯಾವಳಿಯಲ್ಲಿ ನಮ್ಮ ಹಂಚಿಕೆಯ ಬದ್ಧತೆಯನ್ನು ಮತ್ತಷ್ಟು ಬಲಪಡಿಸುತ್ತದೆ. ಜಿಯೋಸ್ಟಾರ್‌ನ ಸಾಟಿಯಿಲ್ಲದ ವ್ಯಾಪ್ತಿ ಮತ್ತು ಪಾನೀಯಗಳಲ್ಲಿ ಕ್ಯಾಂಪಾದ ಬಲವಾದ ಹಿಡಿತದೊಂದಿಗೆ, ನಾವು ಭಾರತದಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ತೊಡಗಿಸಿಕೊಳ್ಳುವುದನ್ನು ಮುಂದುವರಿಸುತ್ತೇವೆ’ ಎಂದು ಹೇಳಿದರು.
ಕಳೆದ ಎರಡು ವರ್ಷಗಳಲ್ಲಿ, ಕ್ಯಾಂಪಾ ಈಗಾಗಲೇ ಹಲವಾರು ಬಿಸಿಸಿಐ ಮತ್ತು ಐಪಿಎಲ್ ತಂಡಗಳೊಂದಿಗೆ ಪಾಲುದಾರಿಕೆ ಮಾಡಿಕೊಳ್ಳುವ ಮೂಲಕ ಕ್ರಿಕೆಟ್ ಕ್ಷೇತ್ರಕ್ಕೆ ಪ್ರವೇಶಿಸಿದೆ. ಈ ಹೊಸ ಪಾಲುದಾರಿಕೆಯು ಅದನ್ನು ಬಲಪಡಿಸುತ್ತದೆ. ಟಾಟಾ ಐಪಿಎಲ್ 2025 ಋತುವಿನಲ್ಲಿ ರಾಸ್ಕಿಕ್ ಗ್ಲೂಕೋ ಎನರ್ಜಿ ಮತ್ತು ಸ್ಪೋರ್ಟ್ಸ್ ಡ್ರಿಂಕ್ ಸ್ಪಿನ್ನರ್ ಅನ್ನು ಪರಿಚಯಿಸಲಾಗುವುದು. ಇದು ಬ್ರಾಂಡ್‌ನ ಪ್ರಸ್ತುತತೆಯನ್ನು ಹೆಚ್ಚಿಸುತ್ತದೆ ಮತ್ತು ಗ್ರಾಹಕರೊಂದಿಗಿನ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ.