ಮುಂದಿನ ಐಪಿಎಲ್ ನಲ್ಲಿ ಮತ್ತೆರಡು ತಂಡಗಳು ಐಪಿಎಲ್ ಸೇರಲಿವೆ. ಆಗಸ್ಟ್ ವೇಳೆಗೆ ಬಿಸಿಸಿಐ ಟೆಂಡರ್ ನಿಗಧಿಪಡಿಸಲಿದೆ. ಇದ್ರಿಂದ ಬಿಸಿಸಿಐ ಗಳಿಗೆ ಇನ್ನಷ್ಟು ಹೆಚ್ಚಾಗಲಿದೆ.
ವರದಿ ಪ್ರಕಾರ, ಆಗಸ್ಟ್ ನಲ್ಲಿ ಬಿಸಿಸಿಐ ಎರಡು ಹೊಸ ತಂಡಗಳಿಗೆ ಟೆಂಡರ್ ನಡೆಸಲಿದೆ. ಅಕ್ಟೋಬರ್ ವೇಳೆಗೆ ಎರಡು ಹೊಸ ತಂಡಗಳು ಸಿದ್ಧವಾಗಲಿವೆ. ಗೋಯೆಂಕಾ ಗ್ರೂಪ್ ಮತ್ತು ಅದಾನಿ ಗ್ರೂಪ್ ಐಪಿಎಲ್ ತಂಡಗಳನ್ನು ಖರೀದಿಸಲು ಸ್ಪರ್ಧೆಯಲ್ಲಿದೆ. ಸ್ಪರ್ಧೆಯಲ್ಲಿ ಅಹಮದಾಬಾದ್ ಮತ್ತು ಲಕ್ನೋ ಫ್ರಾಂಚೈಸಿಗಳು ಮುಂದಿವೆ. ಎರಡು ಹೊಸ ತಂಡಗಳ ಸೇರ್ಪಡೆಯಿಂದ ಪಂದ್ಯಗಳ ಸಂಖ್ಯೆ 15 ರಿಂದ 30 ಆಗಲಿದೆ.
ಡಿಸೆಂಬರ್‌ನಲ್ಲಿ ಬಿಸಿಸಿಐ, ಐಪಿಎಲ್ ಹರಾಜು ನಡೆಸಲಿದೆ. ಹೊಸದಾಗಿ ಆಟಗಾರರ ಹರಾಜು ನಡೆಯಲಿದೆ. ಎಲ್ಲಾ ತಂಡಗಳು 4 ಆಟಗಾರರನ್ನು ಮಾತ್ರ ಉಳಿಸಿಕೊಳ್ಳಲಿದ್ದಾರೆ. ಮೂರು ದೇಶೀಯ ಮತ್ತು ಒಬ್ಬ ವಿದೇಶಿ ಅಥವಾ ಇಬ್ಬರು ದೇಶೀಯ ಮತ್ತು ಇಬ್ಬರು ವಿದೇಶಿ ಆಟಗಾರರನ್ನು ಉಳಿಸಿಕೊಳ್ಳಬಹುದು. ಐಪಿಎಲ್ ತಂಡದಲ್ಲಿ ಗರಿಷ್ಠ 25 ಆಟಗಾರರನ್ನು ಇರಿಸಿಕೊಳ್ಳಬಹುದು. ಎರಡು ಹೊಸ ತಂಡಗಳನ್ನು ಸೇರಿಸುವುದರೊಂದಿಗೆ ಗರಿಷ್ಠ 50 ಆಟಗಾರರಿಗೆ ತಂಡದಲ್ಲಿ ಅವಕಾಶ ಸಿಗಲಿದೆ. 34 ದೇಶೀಯ ಮತ್ತು 16 ವಿದೇಶಿ ಆಟಗಾರರು ತಂಡದ ಭಾಗವಾಗಲಿದ್ದಾರೆ.