
ಇಂದು ದೆಹಲಿಯ ಅರುಣ್ ಜಟ್ಲಿ ಕ್ರೀಡಾಂಗಣದಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗಲಿದ್ದು, ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಇಂದು ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ.
ಕ್ಯಾಪಿಟಲ್ಸ್ ನ ಮುಂದಿನ ಪಯಣ ಇಂದು ನಿರ್ಧಾರವಾಗಲಿದ್ದು ಈ ಪಂದ್ಯವನ್ನು ಸೋತರೆ ಸೆಮಿಫೈನಲ್ ರೇಸ್ ನಿಂದ ಹೊರಬೀಳುವ ಐದನೇ ತಂಡವಾಗಲಿದೆ.
ಡೆಲ್ಲಿ ಕ್ಯಾಪಿಟಲ್ಸ್ ಪ್ರತಿ ಐಪಿಎಲ್ ನಲ್ಲೂ ಬಲಿಷ್ಠ ತಂಡವನ್ನು ಹೊಂದಿದ್ದರೂ ಇದುವರೆಗೂ ಚಾಂಪಿಯನ್ ಪಟ್ಟ ಅಲಂಕರಿಸಲು ವಂಚಿತರಾಗಿದ್ದಾರೆ ಇಂದು ತನ್ನ ಓಂ ಗ್ರೌಂಡ್ ನಲ್ಲಿ ಜಯಭೇರಿಯಾಗುವ ಮೂಲಕ ತನ್ನ ಸೆಮಿ ಫೈನಲ್ ಆಸೆಯನ್ನು ಜೀವಂತವಾಗಿಸಿಕೊಳ್ಳಬೇಕಾಗಿದೆ. ಇನ್ನು ರಾಜಸ್ಥಾನ ರಾಯಲ್ಸ್ ತಂಡ ಜಯಭೇರಿ ಆದರೆ ಐಪಿಎಲ್ ಅಂಕಪಟ್ಟಿಯಲ್ಲಿ ಮತ್ತೊಮ್ಮೆ ನಂಬರ್ ಒನ್ ಸ್ಥಾನಕ್ಕೆ ಜಿಗಿಯಲಿದೆ.