ಹೈದರಾಬಾದ್: ಐಪಿಎಲ್ ನಲ್ಲಿ ಅಪರೂಪದ ದಾಖಲೆ ಸೃಷ್ಟಿಯಾಗಿದೆ. ಸನ್ ರೈಸರ್ಸ್ ಹೈದರಾಬಾದ್ ಹಾಗೂ ಮುಂಬೈ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಐಪಿಎಲ್ ಟಿ20 ಕ್ರಿಕೆಟ್ ಇತಿಹಾಸದಲ್ಲಿಯೇ ಪಂದ್ಯವೊಂದರಲ್ಲಿ ಅತಿ ಹೆಚ್ಚು ಮೊತ್ತ ದಾಖಲಾಗಿದೆ.
ಸನ್ ರೈಸರ್ಸ್ ಹೈದರಾಬಾದ್ 277 ಗಳಿಸಿ ಐಪಿಎಲ್ ಇತಿಹಾಸದಲ್ಲಿಯೇ ಅತಿ ಹೆಚ್ಚು ಮೊತ್ತ ಗಳಿಸಿದ ತಂಡ ಎನ್ನುವ ದಾಖಲೆ ಬರೆದಿದೆ. ಅಮೋಘ ಪ್ರದರ್ಶನ ನೀಡಿದ ಮುಂಬೈ ತಂಡ 246 ರನ್ ಗಳಿಸಿ ಟಿ20 ಪಂದ್ಯ ಒಂದರಲ್ಲಿ ಅತಿ ಹೆಚ್ಚು ಮೊತ್ತ 523 ರನ್ ದಾಖಲಾಗಲು ಕಾರಣವಾಗಿದೆ. ಪಂದ್ಯದಲ್ಲಿ ಮುಂಬೈ ತಂಡ 31 ರನ್ ಗಳಿಂದ ಸೋಲು ಕಂಡಿದೆ.
ಐಪಿಎಲ್ ಇತಿಹಾಸದಲ್ಲಿಯೇ ಪಂದ್ಯವೊಂದರಲ್ಲಿ ಗರಿಷ್ಠ 38 ಸಿಕ್ಸರ್ ದಾಖಲಾಗಿವೆ. ಐಪಿಎಲ್ ಇನಿಗ್ಸ್ ನಲ್ಲಿ ಗರಿಷ್ಠ ರನ್ ಕಲೆ ಹಾಕಿದ ದಾಖಲೆ ಸನ್ ರೈಸರ್ಸ್ ಪಾಲಾಗಿದೆ. 10 ವರ್ಷಗಳಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹೆಸರಿನಲ್ಲಿದ್ದ 263 ರನ್ ದಾಖಲೆಯನ್ನು ಸನ್ ರೈಸರ್ಸ್ 277 ರನ್ ಸಿಡಿಸುವ ಮೂಲಕ ಹಿಂದಿಕ್ಕಿದೆ.
ಸನ್ ರೈಸರ್ಸ್ 277 ರನ್ ಗಳಿಸಿರುವುದು ಫ್ರಾಂಚೈಸಿ ಟಿ20 ಲೀಗ್ ನಲ್ಲಿಯೂ ಗರಿಷ್ಠ ದಾಖಲೆಯಾಗಿದೆ. 2022ರಲ್ಲಿ ಆಸ್ಟ್ರೇಲಿಯಾದ ಬಿಗ್ ಬ್ಯಾಶ್ ಲೀಗ್ ನಲ್ಲಿ ಸ್ಟಾರ್ ತಂಡ ಹೊಬರ್ಟ್ ಹರಿಕೆನ್ಸ್ ವಿರುದ್ಧ ಎರಡು ವಿಕೆಟ್ ಗೆ 273 ರನ್ ಗಳಿಸಿದ್ದು ಈ ಹಿಂದಿನ ದಾಖಲೆಯಾಗಿತ್ತು.. ದಕ್ಷಿಣಾ ಆಫ್ರಿಕಾ ಲೀಗ್ ನಲ್ಲಿ ನೈಟ್ಸ್ ವಿರುದ್ಧ ಟೈಟನ್ಸ್ ಮೂರು ವಿಕೆಟ್ ಗೆ 271 ಗಳಿಸಿತ್ತು.