ನವದೆಹಲಿ: 2023 ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮಾರ್ಚ್ 31ರಂದು ಅದ್ದೂರಿ ಉದ್ಘಾಟನಾ ಸಮಾರಂಭದೊಂದಿಗೆ ಪ್ರಾರಂಭವಾಗಿವೆ. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಮತ್ತು ಎಂಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ರೋಚಕ ಪಂದ್ಯ ನಡೆದಿದೆ.
ಈ ವರ್ಷ ಹೆಚ್ಚು ನಿರೀಕ್ಷಿತ T20 ಕ್ರಿಕೆಟ್ ಸಂಭ್ರಮದ 16 ನೇ ಆವೃತ್ತಿ ಇದಾಗಿದೆ. ಇದರಲ್ಲಿ ಹತ್ತು ಫ್ರಾಂಚೈಸಿಗಳು ತಮ್ಮ ನಾಯಕರ ನೇತೃತ್ವದಲ್ಲಿ ಪರಸ್ಪರ ಸ್ಪರ್ಧಿಸಲಿದ್ದಾರೆ. ಪಂದ್ಯಾವಳಿಯ ಪೂರ್ವ ಆಚರಣೆಗಳ ಭಾಗವಾಗಿ, ನಾಯಕರು ಭವ್ಯವಾದ ಐಪಿಎಲ್ ಟ್ರೋಫಿಯೊಂದಿಗೆ ಫೋಟೋಗೆ ಪೋಸ್ ನೀಡಿದ್ದರು. ಇದೀಗ ವೈರಲ್ ಆಗಿದ್ದು, ಚರ್ಚೆಗೆ ಗ್ರಾಸವಾಗಿದೆ.
ಇದಕ್ಕೆ ಕಾರಣ, ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಚಿತ್ರದಿಂದ ಕಾಣೆಯಾಗಿದ್ದಾರೆ ! ಇದನ್ನು ಅಭಿಮಾನಿಗಳು ಗಮನಿಸಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಕೋಲಾಹಲವನ್ನು ಉಂಟುಮಾಡುತ್ತಿದೆ.
ಮುಂಬೈ ಇಂಡಿಯನ್ಸ್ ನಾಯಕನ ಅನುಪಸ್ಥಿತಿಯ ಬಗ್ಗೆ ಅನೇಕ ಅಭಿಮಾನಿಗಳು ಹಾಸ್ಯಮಯ ಮೀಮ್‌ಗಳು ಮತ್ತು ಜೋಕ್‌ಗಳೊಂದಿಗೆ ಜಾಲತಾಣದಲ್ಲಿ ಚಿತ್ರವನ್ನುಹಂಚಿಕೊಳ್ಳುತ್ತಿದ್ದಾರೆ. ಕೆಲವು ಮುಂಬೈ ಇಂಡಿಯನ್ಸ್ ಅಭಿಮಾನಿಗಳು ಜಾಣತನದಿಂದ ವ್ಯಂಗ್ಯವಾಡಿದ್ದಾರೆ, ತಂಡವು ಈಗಾಗಲೇ ಅವರನ್ನು ಕೈಬಿಟ್ಟಿದೆ ಎಂದು ಕೆಲವರು ಲೇವಡಿ ಮಾಡಿದ್ದಾರೆ. ಹಿಂದಿನ ಕಾರಣ ಇನ್ನೂ ತಿಳಿದಿಲ್ಲವಾದರೂ, ಸಾಮಾಜಿಕ ಮಾಧ್ಯಮದಲ್ಲಿನ ತಮಾಷೆಯ ಮೀಮ್ಸ್ ಹರಿದಾಡುತ್ತಿವೆ.