ಅಹಮದಾಬಾದ್: ಐಪಿಎಲ್ 16ನೇ (IPL 2023) ಸೀಸನ್ಗೆ ಅದ್ಧೂರಿ ಆರಂಭ ಸಿಕ್ಕಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯುತ್ತಿದ್ದು, ಮೊದಲ ಪಂದ್ಯಕ್ಕೆ ಉಭಯ ತಂಡಗಳು ಬಲಿಷ್ಠ ಆಡುವ ಇಲೆವೆನ್ ಪ್ರಕಟಿಸಿದ್ದವು.
16ನೇ ಆವೃತ್ತಿಯ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಗೆಲುವಿನಿಂದ ಅಭಿಯಾನ ಆರಂಭಿಸಿದೆ. ಆದರೆ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್, ಸೋಲಿನೊಂದಿಗೆ 16ನೇ ಆವೃತ್ತಿ ಆರಂಭಿಸಿದೆ. ಆರಂಭಿಕ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಐದು ವಿಕೆಟ್‌ಗಳ ಗೆಲುವು ಸಾಧಿಸಲಾಗಿದೆ.
ಒಂದು ಲಕ್ಷಕ್ಕೂ ಹೆಚ್ಚು ಅಭಿಮಾನಿಗಳು ಪಂದ್ಯ ವೀಕ್ಷಿಸಿದರು. ಮೊದಲು ಅರಿಜಿತ್ ಸಿಂಗ್, ತಮನ್ನಾ ಭಾಟಿಯಾ ಮತ್ತು ರಶ್ಮಿಕಾ ಮಂದಣ್ಣ ಅವರ ನೃತ್ಯದೊಂದಿಗೆ ಉದ್ಘಾಟನಾ ಸಮಾರಂಭ ನಡೆಯಿತು. ಆದರೆ ಅಲ್ಲಿಗೆ ಹೋಗಲು ಆಗದವರು ತಮ್ಮ ಮನೆಗಳಿಂದಲೇ ಈ ಪಂದ್ಯವನ್ನು ವೀಕ್ಷಣೆ ಮಾಡಿದರು.
ಲಕ್ಷಾಂತರ ಐಪಿಎಲ್ ವೀಕ್ಷಕರು ಪಂದ್ಯದ ಭೋಜ್‌ಪುರಿ ಕಾಮೆಂಟರಿಯೊಂದಿಗೆ ಉಲ್ಲಾಸವನ್ನು ಮನೆಯಿಂದಲೇ ಅನುಭವಿಸಿದ್ದು, ಜಿಯೋ ಸಿನಿಮಾದ ಮೂಲಕ. IPL ಪಂದ್ಯಗಳನ್ನು 12 ಭಾಷೆಗಳಲ್ಲಿ ಸ್ಟ್ರೀಮ್ ಮಾಡಬಹುದು. ಇಂಗ್ಲೀಷ್, ಹಿಂದಿ, ಮರಾಠಿ, ಗುಜರಾತಿ, ಭೋಜ್‌ಪುರಿ, ಪಂಜಾಬಿ, ಒರಿಯಾ, ಬೆಂಗಾಲಿ, ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಲಭ್ಯವಿದೆ.
https://twitter.com/vicharabhio/status/1641851313339367426?ref_src=twsrc%5Etfw%7Ctwcamp%5Etweetembed%7Ctwterm%5E1641851313339367426%7Ctwgr%5E8f71702323d582662ca5785b2f02fde9680990ee%7Ctwcon%5Es1_&ref_url=https%3A%2F%2Fwww.news18.com%2Fbuzz%2Fipl-2023-bhojpuri-commentary-emerges-unlikely-winner-of-the-season-on-twitter-7437637.html