ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂ ಎಸ್ ಧೋನಿ ಅಭಿಮಾನಿಗಳಿಗೆ ದೊಡ್ಡ ಸುದ್ದಿಯೊಂದಿದೆ. ಚೆನ್ನೈ ಅಭಿಮಾನಿಗಳಿಗೆ ಈ ನ್ಯೂಸ್ ಶಾಕ್ ನೀಡೋದ್ರಲ್ಲಿ ಎರಡು ಮಾತಿಲ್ಲ. 2022ರ ಐಪಿಎಲ್ ನಲ್ಲಿ ಧೋನಿ, ಚೆನ್ನೈ ಪರ ಆಡೋದು ಅನುಮಾನ. 2022ರಲ್ಲಿ ಮತ್ತೆರಡು ಫ್ರಾಂಚೈಸಿಗಳು ಐಪಿಎಲ್ ಸೇರಲಿವೆ. ಕೆಲ ಆಟಗಾರರನ್ನು ಹೊರತುಪಡಿಸಿ, ಬಹುತೇಕ ಎಲ್ಲ ಆಟಗಾರರು ಹರಾಜಿನಲ್ಲಿ ಪಾಲ್ಗೊಳ್ಳಲಿದ್ದಾರೆ. ಮೆಗಾ ಹರಾಜಿಗೂ ಮುನ್ನ ಚೆನ್ನೈ ತಂಡದ ಮಾಲೀಕ ಎನ್ ಶ್ರೀನಿವಾಸನ್ ಮಹತ್ವದ ಹೇಳಿಕೆ ನೀಡಿದ್ದಾರೆ.
ಸಿಎಸ್ಕೆ ತಂಡ, ಮತ್ತೊಮ್ಮೆ ತನ್ನನ್ನು ಉಳಿಸಿಕೊಳ್ಳಲಿ ಎಂದು ಮಹೇಂದ್ರ ಸಿಂಗ್ ಧೋನಿ ಬಯಸುತ್ತಿಲ್ಲವೆಂದು ಎನ್ ಶ್ರೀನಿವಾಸನ್ ಹೇಳಿದ್ದಾರೆ. ಸಿಎಸ್ಕೆ ತಂಡ ತನ್ನ ಮೇಲೆ ಹೆಚ್ಚಿನ ಹಣ ವ್ಯರ್ಥ ಮಾಡುವುದು ಧೋನಿಗೆ ಇಷ್ಟವಿಲ್ಲವೆಂದು ಶ್ರೀನಿವಾಸನ್ ಹೇಳಿದ್ದಾರೆ. ಈ ಮೂಲಕ ಮುಂದಿನ ಐಪಿಎಲ್ ನಲ್ಲಿ ಧೋನಿ, ಚೆನ್ನೈ ಭಾಗವಾಗಿರುವುದಿಲ್ಲ ಎಂಬುದರ ಸೂಚನೆ ನೀಡಿದ್ದಾರೆ.
ಪುತ್ರನನ್ನು ಬೆಂಗಳೂರಿನ ಕಾಲೇಜಿಗೆ ಸೇರಿಸಿ ಹೆಮ್ಮೆ ವ್ಯಕ್ತಪಡಿಸಿದ ಅಸ್ಸಾಂ ಸಿಎಂ
ಧೋನಿ ನಾಯಕತ್ವದಲ್ಲಿ ಚೆನ್ನೈ ಐಪಿಎಲ್ 2021 ರ ಪ್ರಶಸ್ತಿ ಗೆದ್ದಿದೆ. ಧೋನಿ ನಾಯಕತ್ವದಲ್ಲಿ ಸಿಎಸ್ಕೆ ನಾಲ್ಕು ಬಾರಿ ಪ್ರಶಸ್ತಿ ಗೆದ್ದಿದೆ. 40 ವರ್ಷದ ಧೋನಿ ಮುಂದಿನ ವರ್ಷ ಐಪಿಎಲ್‌ನಲ್ಲಿ ಆಡುವುದು ಅನುಮಾನ. ಮುಂದಿನ ವರ್ಷವೂ ಐಪಿಎಲ್‌ನಲ್ಲಿ ಆಡ್ತೇನೆಂದು ಧೋನಿ ಹೇಳಿದ್ದರು. ಆದ್ರೆ ಧೋನಿ ಆಡುವುದು ಅನುಮಾನ ಎನ್ನಲಾಗ್ತಿದೆ. ಈ ಬಾರಿ ಐಪಿಎಲ್‌ನಲ್ಲಿ ಧೋನಿ ಪ್ರದರ್ಶನ ಅತ್ಯಂತ ನಿರಾಶಾದಾಯಕವಾಗಿದ್ದೇ ಇದಕ್ಕೆ ಕಾರಣ ಎನ್ನಬಹುದು.
ಚೆನ್ನೈ ಸೂಪರ್ ಕಿಂಗ್ಸ್ ನ ಮಾಲೀಕ ಎನ್. ಶ್ರೀನಿವಾಸನ್, ಧೋನಿ ಪ್ರಾಮಾಣಿಕ ಮತ್ತು ನ್ಯಾಯಯುತ ವ್ಯಕ್ತಿ. ಅವರ ಮೇಲೆ ತಂಡ ಹೆಚ್ಚಿನ ಹಣ ಖರ್ಚು ಮಾಡಲು ಬಯಸುವುದಿಲ್ಲ. ಮುಂದಿನ ವರ್ಷವೂ ಧೋನಿ ನಾಯಕನಾಗಬೇಕೆಂಬ ಆಸೆಯಿದೆ ಎಂದಿದ್ದಾರೆ. ಈ ಹಿಂದೆ, ಧೋನಿ ಸಿಎಸ್‌ಕೆ, ಚೆನ್ನೈ ಮತ್ತು ತಮಿಳುನಾಡಿನ ಪ್ರಮುಖ ಭಾಗ. ಧೋನಿ ಇಲ್ಲದೆ ಸಿಎಸ್ಕೆ ಇಲ್ಲ, ಸಿಎಸ್ಕೆ ಇಲ್ಲದೆ ಧೋನಿ ಇಲ್ಲ ಎಂದಿದ್ದರು.