ಐಪಿಎಲ್ 2022ರ ಮೆಗಾ ಹರಾಜು ಆರಂಭವಾಗುವ ಮೊದಲೇ ಎಲ್ಲಾ ಫ್ರಾಂಚೈಸಿಗಳು ಕೆಲ ಆಟಗಾರರನ್ನು ಉಳಿಸಿಕೊಳ್ಳುವ ಅವಕಾಶ ನೀಡಲಾಗಿದೆ. ಈಗಾಗಲೇ ಎಲ್ಲ ಫ್ರಾಂಚೈಸಿಗಳು ಆಟಗಾರರ ಪಟ್ಟಿಯನ್ನು ಸಿದ್ಧಪಡಿಸಿವೆ. ಸದ್ಯ ಹರಾಜು ದಿನಾಂಕ ಘೋಷಣೆಯಾಗಿಲ್ಲ, ಅದಕ್ಕೂ ಮುನ್ನ ತಂಡದಲ್ಲಿ ಉಳಿಸಿಕೊಳ್ಳುವ ಆಟಗಾರರ ಸಂಭಾವನೆ ಬಹಿರಂಗವಾಗಿದೆ.
ಐಪಿಎಲ್‌ನ ಎಲ್ಲಾ ಹಳೆಯ 8 ತಂಡಗಳು ನವೆಂಬರ್ 30 ರೊಳಗೆ ಗರಿಷ್ಠ 4 ಆಟಗಾರರ ಪಟ್ಟಿಯನ್ನು ಬಿಸಿಸಿಐಗೆ ಹಸ್ತಾಂತರಿಸಲಿವೆ. ಇದರೊಂದಿಗೆ ಫ್ರಾಂಚೈಸಿಗಳು ಬಿಡುಗಡೆ ಮಾಡಿರುವ ಆಟಗಾರರ ಹೆಸರು ಕೂಡ ಹೊರಬೀಳಲಿದೆ.
ಐಪಿಎಲ್ 2022 ರಲ್ಲಿ, 2 ಹೊಸ ತಂಡಗಳು ಸೇರ್ಪಡೆಗೊಳ್ಳಲಿವೆ. ಎರಡೂ ಫ್ರಾಂಚೈಸಿಗಳಿಗೆ ಮೆಗಾ ಹರಾಜಿನ ಮೊದಲು 3 ಆಟಗಾರರನ್ನು ಖರೀದಿಸಲು ಅವಕಾಶ ನೀಡಲಾಗುತ್ತದೆ. ಇಬ್ಬರು ಭಾರತೀಯ ಆಟಗಾರರು ಹಾಗೂ ಒಬ್ಬ ವಿದೇಶಿ ಆಟಗಾರನನ್ನು ಖರೀದಿಸಬಹುದು.
ಆಟಗಾರರನ್ನು ಉಳಿಸಿಕೊಂಡ ರೀತಿಯಲ್ಲಿ ಅವರ ಸಂಬಳ ನಿರ್ಧಾರವಾಗಲಿದೆ.
4 ಆಟಗಾರರು : 42 ಕೋಟಿ ರೂಪಾಯಿ. (16 ಕೋಟಿ, 12 ಕೋಟಿ, 8 ಕೋಟಿ, ಮತ್ತು 6 ಕೋಟಿ)
3 ಆಟಗಾರರು : 33 ಕೋಟಿ ರೂಪಾಯಿ. (15 ಕೋಟಿ, 11 ಕೋಟಿ, ಮತ್ತು 7 ಕೋಟಿ)
2 ಆಟಗಾರರು : 22 ಕೋಟಿ ರೂಪಾಯಿ (14 ಕೋಟಿ ಮತ್ತು 10 ಕೋಟಿ)
1 ಆಟಗಾರ : 14 ಕೋಟಿ ರೂಪಾಯಿ.
ಕಳೆದ ವರ್ಷಕ್ಕೆ ಹೋಲಿಸಿದರೆ ಬಿಸಿಸಿಐ ಎಲ್ಲಾ ತಂಡಗಳ ಪರ್ಸ್ ಗಾತ್ರವನ್ನು ಹೆಚ್ಚಿಸಿದೆ. 2021ರ ಐಪಿಎಲ್ ಹರಾಜಿನಲ್ಲಿ ಒಬ್ಬರು 85 ಕೋಟಿ ರೂಪಾಯಿ ಖರ್ಚು ಮಾಡಬಹುದಾಗಿತ್ತು. ಈ ವರ್ಷ ಈ ಗಾತ್ರವನ್ನು 90 ಕೋಟಿ ರೂಪಾಯಿಗೆ ಹೆಚ್ಚಿಸಲಾಗಿದೆ.