alex Certify ಐಪಿಎಲ್ 2022ರ ವೇಳಾಪಟ್ಟಿ ಪ್ರಕಟ: ಮೊದಲ ಪಂದ್ಯದಲ್ಲಿ ಮೈದಾನಕ್ಕಿಳಿಯಲಿದ್ದಾರೆ ಧೋನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಐಪಿಎಲ್ 2022ರ ವೇಳಾಪಟ್ಟಿ ಪ್ರಕಟ: ಮೊದಲ ಪಂದ್ಯದಲ್ಲಿ ಮೈದಾನಕ್ಕಿಳಿಯಲಿದ್ದಾರೆ ಧೋನಿ

ಐಪಿಎಲ್ 2022ರ ವೇಳಾಪಟ್ಟಿ ಬಹುತೇಕ ನಿರ್ಧಾರವಾಗಿದೆ. ಐಪಿಎಲ್ 2022ರ ಮೊದಲ ಪಂದ್ಯ ಏಪ್ರಿಲ್ ಮೊದಲ ವಾರದಿಂದ ಆರಂಭವಾಗಲಿದೆ. ಎಂಎಸ್ ಧೋನಿ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್, ಐಪಿಎಲ್ ನ ಮೊದಲ ಪಂದ್ಯ ಆಡಲಿದೆ.

ಚೆನ್ನೈ ಸೂಪರ್ ಕಿಂಗ್ಸ್, 2021ರ ಪ್ರಶಸ್ತಿ ಗೆದ್ದುಕೊಂಡಿದ್ದು, ಹಾಲಿ ಚಾಂಪಿಯನ್ ಆಗಿರುವ ಕಾರಣ, ಆರಂಭಿಕ ಪಂದ್ಯದಲ್ಲಿ ಅದಕ್ಕೆ ಅವಕಾಶ ಸಿಗಲಿದೆ. 2022ರಲ್ಲಿ 8 ತಂಡಗಳ ಬದಲಿಗೆ 10 ತಂಡಗಳು ಮೈದಾನಕ್ಕಿಳಿಯಲಿವೆ. 2 ಹೊಸ ತಂಡಗಳ ಸೇರ್ಪಡೆಯೊಂದಿಗೆ ಪಂದ್ಯಗಳ ಸಂಖ್ಯೆ 60 ರಿಂದ 74 ಕ್ಕೆ ಏರಲಿದೆ.

ಐಪಿಎಲ್ 2022ರ ಎಲ್ಲ ಪಂದ್ಯಗಳು ಭಾರತದಲ್ಲಿಯೇ ನಡೆಯಲಿದೆ ಎಂದು ಬಿಸಿಸಿಐ ಘೋಷಣೆ ಮಾಡಿದೆ. ಏಪ್ರಿಲ್ 2 ರಿಂದ ಸರಣಿ ಶುರುವಾಗಲಿದ್ದು, ಮೊದಲ ಪಂದ್ಯ ಚೆನ್ನೈನಲ್ಲಿ ನಡೆಯಲಿದೆ. ಸೆಮಿಫೈನಲ್ ಹಾಗೂ ಫೈನಲ್ ಪಂದ್ಯ ಜೂನ್ 4 ಅಥವಾ 5 ರಂದು ನಡೆಯುವ ಸಾಧ್ಯತೆಯಿದೆ. ಎಲ್ಲ ತಂಡಗಳು ತಲಾ 14-14 ಪಂದ್ಯಗಳನ್ನು ಆಡಲಿವೆ. 7 ತವರಿನಲ್ಲಿ ಹಾಗೂ 7 ಬೇರೆ ನಗರದಲ್ಲಿ ನಡೆಯಲಿದೆ.

ಆರಂಭಿಕ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಯಾವ ತಂಡವನ್ನು ಎದುರಿಸಲಿದೆ ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಮುಂಬೈ ಇಂಡಿಯನ್ಸ್ ಜೊತೆ ಚೆನ್ನೈ ಮೊದಲ ಪಂದ್ಯದಲ್ಲಿ ಮೈದಾನಕ್ಕಿಳಿಯುವ ಸಾಧ್ಯತೆಯಿದೆ.  ರೋಹಿತ್ ಶರ್ಮಾ ನಾಯಕತ್ವದಲ್ಲಿ ಮುಂಬೈ ಅತಿ ಹೆಚ್ಚು ಬಾರಿ ಟಿ20 ಲೀಗ್‌ನಲ್ಲಿ ಪ್ರಶಸ್ತಿ ಗೆದ್ದುಕೊಂಡಿದೆ. ಸಿಎಸ್ಕೆ 4 ಬಾರಿ ಪ್ರಶಸ್ತಿ ಗೆದ್ದಿದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...