ಐಪಿಎಲ್ ನಲ್ಲಿ ಡಿ ಆರ್ ಎಸ್ ವಿವಾದ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ. ಶನಿವಾರ ನಡೆದ ಕೆಕೆಆರ್ ಮತ್ತು ಎಸ್ ಆರ್ ಎಚ್ ಪಂದ್ಯದ ವೇಳೆ ಡಿ ಆರ್ ಎಸ್ ವಿವಾದ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.
ಕೆಕೆಆರ್ ನ ರಿಂಕುಸಿಂಗ್ ಮತ್ತು ಸ್ಯಾಮ್ ಬಿಲ್ಲಿಂಗ್ಸ್ ಬ್ಯಾಟ್ ಮಾಡುತ್ತಿದ್ದರು. ಎಸ್ ಆರ್ ಎಚ್ ನ ನಟರಾಜನ್ ಯಾರ್ಕರ್ ಎಸೆತದಲ್ಲಿ ರಿಂಕು ಪ್ಯಾಡ್ ಗೆ ಬಾಲ್ ಬಡಿಯಿತು. ಆಗ ನಟರಾಜನ್ ಸೇರಿದಂತೆ ಎಸ್ ಆರ್ ಎಚ್ ನ ಎಲ್ಲಾ ಫೀಲ್ಡರ್ ಗಳು ಬಲವಾಗಿ ರಿಂಕು ಸಿಂಗ್ ಔಟೆಂದು ಅಪೀಲ್ ಮಾಡಿದರು. ಈ ಅಪೀಲ್ ಗೆ ಪ್ರತಿಕ್ರಿಯಿಸಲು ತುಂಬಾ ಹೊತ್ತು ತೆಗೆದುಕೊಂಡ ಫೀಲ್ಡ್ ಅಂಪೈರ್ ಕೆಎನ್ ಅನಂತ ಪದ್ಮನಾಭನ್ ಅವರು, ಔಟೆಂದು ಘೋಷಿಸಿದರು.
ಆದರೆ, ಬ್ಯಾಟರ್ ಗಳಾದ ಬಿಲ್ಲಿಂಗ್ಸ್ ಮತ್ತು ರಿಂಕು ಚರ್ಚೆಯಲ್ಲಿ ತೊಡಗಿದರು. ಹೀಗೆ ಚರ್ಚೆಯಲ್ಲಿರುವಾಗಲೇ ಟೈಮರ್ ನಲ್ಲಿ ಸಮಯ ಸೊನ್ನೆಗೆ ಬಂದು ನಿಂತಿತು. ಹೀಗಾಗಿ ಕೆಕೆಆರ್ ನ ರೆವ್ಯೂ ಕಾಲಾವಕಾಶ ಮುಗಿದುಹೋಗಿತ್ತು. ಆಗ ನಿಮ್ಮ ರಿವ್ಯೂ ಕೇಳುವ ಕಾಲಾವಕಾಶ ಮುಗಿಯಿತು ಎಂದು ಅಂಪೈರ್ ಬ್ಯಾಟರ್ ಗಳ ಗಮನಕ್ಕೆ ತಂದರು.
BIG NEWS: ಸಿಎಂ ಬೊಮ್ಮಾಯಿ ದಾವೋಸ್ ಪ್ರವಾಸ ನಿಗದಿ; 5 ದಿನಗಳ ಕಾಲ ವಿದೇಶ ಪ್ರವಾಸ
ಆದರೆ, ಅಂಪೈರ್ ಔಟ್ ಸಿಗ್ನಲ್ ತೋರಿಸಿದ ತಕ್ಷಣ ನಾನು ರಿವ್ಯೂಗೆ ಮನವಿ ಮಾಡಿದ್ದೇನೆ ಎಂದು ಬಿಲ್ಲಿಂಗ್ಸ್ ಅಂಪೈರ್ ಬಳಿ ವಾದ ಮಾಡಿದರಾದರೂ, ನಿಯಮದ ಪ್ರಕಾರ ಬಾಲ್ ಎದುರಿಸಿದ ಬ್ಯಾಟರ್ ಸಹ ರಿವ್ಯೂಗೆ ಮನವಿ ಮಾಡಬೇಕು ಎಂದು ಹೇಳಿ ಅಂಪೈರ್ ಮನವಿಯನ್ನು ತಿರಸ್ಕರಿಸಿ ರಿಂಕು ಸಿಂಗ್ ಔಟೆಂದು ಘೋಷಿಸಿದರು. ಈ ಮೂಲಕ ಡಿ ಆರ್ ಎಸ್ ನಿಯಮ ಮತ್ತೊಂದು ವಿವಾದಕ್ಕೆ ಗುರಿಯಾಯಿತು.
https://twitter.com/sauri_1211/status/1525494496720347136?ref_src=twsrc%5Etfw%7Ctwcamp%5Etweetembed%7Ctwterm%5E1525494496720347136%7Ctwgr%5E%7Ctwcon%5Es1_&ref_url=https%3A%2F%2Fzeenews.india.com%2Fcricket%2Fipl-2022-drs-controversy-erupts-in-kkr-vs-srh-game-as-rinku-singh-forgets-to-take-review-in-time-2463569.html