ಐಪಿಎಲ್ 15ನೇ ಋತುವಿನ ಮೇಲೆ ಎಲ್ಲರ ಕಣ್ಣಿದೆ. ಇಡೀ ವಿಶ್ವವೇ 2022ರ ಐಪಿಎಲ್ ವೀಕ್ಷಣೆಗೆ ಕುತೂಹಲದಿಂದ ಕಾಯ್ತಿದೆ. ಈ ಬಾರಿ 8 ತಂಡಗಳ ಬದಲಿಗೆ 10 ತಂಡಗಳು ಮೈದಾನಕ್ಕಿಳಿಯಲಿವೆ. ಮುಂದಿನ ತಿಂಗಳ ಕೊನೆಯಲ್ಲಿ ಐಪಿಎಲ್ ಆರಂಭವಾಗಲಿದೆ ಎನ್ನಲಾಗ್ತಿದೆ. ಐಪಿಎಲ್ ಆರಂಭಕ್ಕೂ ಮುನ್ನವೇ ನಾಲ್ಕು ಬಾರಿ ಚಾಂಪಿಯನ್ ಪಟ್ಟಕ್ಕೇರಿದ್ದ ಚೆನ್ನೈ ಸೂಪರ್ ಕಿಂಗ್ಸ್ ಗೆ ಬಾರೀ ಹಿನ್ನಡೆಯಾಗಿದೆ. ಮಹೇಂದ್ರ ಸಿಂಗ್ ಧೋನಿ ತಂಡದಿಂದ ಪ್ರಮುಖ ಆಟಗಾರನೊಬ್ಬ ಹೊರಗುಳಿಯಲಿದ್ದಾರೆ.
CSK ವೇಗದ ಬೌಲರ್ ದೀಪಕ್ ಚಹಾರ್ ಗಾಯದ ಕಾರಣ ಐಪಿಎಲ್ ನಿಂದ ಹೊರಗುಳಿಯಲಿದ್ದಾರೆಂದು ಮೂಲಗಳು ಹೇಳಿವೆ. ಚಹಾರ್, ವೆಸ್ಟ್ ಇಂಡೀಸ್ ವಿರುದ್ಧ ನಡೆದ ಸರಣಿಯ ವೇಳೆ ಗಾಯಗೊಂಡಿದ್ದರು. ಶ್ರೀಲಂಕಾ ವಿರುದ್ಧ ನಡೆಯುವ ಟಿ-20 ಪಂದ್ಯವನ್ನು ಆಡ್ತಿಲ್ಲ.
ದೀಪಕ್ ಬಲತೊಡೆಯಲ್ಲಿ ನೋವು ಕಾಣಿಸಿಕೊಂಡಿದೆ. ಅವರ ನೋವು ತೀವ್ರವಾಗಿದ್ದು, ಪೂರ್ತಿ ಐಪಿಎಲ್ ನಲ್ಲಿ ಅವರು ಕಾಣಿಸುವುದಿಲ್ಲವೆನ್ನಲಾಗ್ತಿದೆ. ಚಹಾರ್ ಅವರನ್ನು 14 ಕೋಟಿ ರೂಪಾಯಿಗೆ CSK ಮತ್ತೆ ಖರೀದಿಸಿತ್ತು. CSK ಬಿಟ್ಟು ಬೇರೆ ಜರ್ಸಿಯಲ್ಲಿ ಆಡುವುದಿಲ್ಲವೆಂದು ಚಹಾರ್ ಹೇಳಿದ್ದಾರೆ. ಚಹಾರ್ ಐಪಿಎಲ್ನ 69 ಪಂದ್ಯಗಳಲ್ಲಿ 59 ವಿಕೆಟ್ ಪಡೆದಿದ್ದಾರೆ.