alex Certify RCB ಡ್ರೆಸ್ಸಿಂಗ್ ರೂಮ್ ವಿಡಿಯೋ ವೈರಲ್: ಕೊಹ್ಲಿ ಮಾತು ಕೇಳಿ ಭಾವುಕರಾದ ಅಭಿಮಾನಿಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

RCB ಡ್ರೆಸ್ಸಿಂಗ್ ರೂಮ್ ವಿಡಿಯೋ ವೈರಲ್: ಕೊಹ್ಲಿ ಮಾತು ಕೇಳಿ ಭಾವುಕರಾದ ಅಭಿಮಾನಿಗಳು

ಈ ಬಾರಿ ವಿರಾಟ್ ಪಡೆ ಐಪಿಎಲ್ ನಲ್ಲಿ ಕಪ್ ಎತ್ತಲಿದೆ ಎಂಬ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ಭಾರೀ ನಿರಾಸೆಯಾಗಿದೆ. ವಿರಾಟ್ ಕೊಹ್ಲಿ ನೇತೃತ್ವದ ಆರ್ಸಿಬಿ ತಂಡ ಐಪಿಎಲ್ ನಿಂದ ಹೊರ ಬಿದ್ದಿದೆ.

ಆರ್ಸಿಬಿ ಅಭಿಮಾನಿಗಳು ಮಾತ್ರವಲ್ಲ ಆರ್ಸಿಬಿ ಆಟಗಾರರು ಕೂಡ ಸಾಕಷ್ಟು ನಿರಾಸೆಗೊಂಡಿದ್ದಾರೆ. ಇದು ಕೊಹ್ಲಿ ನೇತೃತ್ವದಲ್ಲಿ ನಡೆದ ಕೊನೆಯ ಆರ್ಸಿಬಿ ಪಂದ್ಯ. ಕೊಹ್ಲಿ, ಆರ್ಸಿಬಿ ನಾಯಕತ್ವದಿಂದ ಕೆಳಗಿಳಿಯುವ ಘೋಷಣೆಯನ್ನು ಮೊದಲೇ ಮಾಡಿದ್ದರು.

ಪಂದ್ಯದ ನಂತ್ರ ಆಟಗಾರರು ಡ್ರೆಸ್ಸಿಂಗ್ ರೂಮಿನಲ್ಲಿ ಭಾವುಕರಾಗಿದ್ದರು. ಅನೇಕ ಆಟಗಾರರು ತಮ್ಮ ಅನುಭವವನ್ನು ಹಂಚಿಕೊಂಡರು. ಈ ವೇಳೆ ಕೊಹ್ಲಿ, ಭಾವುಕರಾಗಿದ್ದರು. ಮಾತನಾಡುವಾಗ ಇದು ಸ್ಪಷ್ಟವಾಗಿ ಗೋಚರಿಸಿತ್ತು. 2016 ರ ಸೀಸನ್ ನಮಗೆ ಬಹಳ ವಿಶೇಷವಾಗಿತ್ತು. ಆದರೆ ಈ ಋತುವನ್ನು ಆನಂದಿಸಿದ್ದೇವೆ. ತಂಡದ ಬಗ್ಗೆ ತುಂಬಾ ಹೆಮ್ಮೆ ಇದೆ ಎಂದ ಕೊಹ್ಲಿ, ಎಲ್ಲರಿಗೂ ಧನ್ಯವಾದ ಹೇಳಿದರು.

ಆರ್ಸಿಬಿ ಡ್ರೆಸ್ಸಿಂಗ್ ರೂಮಿನ ಈ ವಿಡಿಯೋ ಈಗ ವೈರಲ್ ಆಗಿದೆ. ಅಭಿಮಾನಿಗಳು ಪ್ರತಿಕ್ರಿಯೆ ನೀಡ್ತಿದ್ದಾರೆ. ಈ ವಿಡಿಯೋ ನೋಡಿದ ನಂತ್ರ ಇದು ದುಃಖ ತರಿಸುತ್ತಿದೆ ಎಂದು ಅಭಿಮಾನಿಗಳು ಹೇಳಿದ್ದಾರೆ.

https://www.youtube.com/watch?v=zNWoofjSgGE

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...