ಇಂಡಿಯನ್ ಪ್ರೀಮಿಯರ್ ಲೀಗ್ ಬಗ್ಗೆ ಕ್ರಿಕೆಟ್ ಅಭಿಮಾನಿಗಳಿಗೆ ವಿಶೇಷ ಆಸಕ್ತಿಯಿದೆ. ಐಪಿಎಲ್ ಅನೇಕ ಆಟಗಾರರ ಭವಿಷ್ಯ ರೂಪಿಸಿದೆ. ಅಂತರಾಷ್ಟ್ರೀಯ ಕ್ರಿಕೆಟ್ ಗೆ ಮಹೇಂದ್ರ ಸಿಂಗ್ ಧೋನಿ ನಿವೃತ್ತಿ ಘೋಷಣೆ ಮಾಡಿದ್ರೂ,ಧೋನಿ ಪ್ರಸಿದ್ಧಿ ಕಡಿಮೆಯಾಗಿಲ್ಲ. ಐಪಿಎಲ್ ನಲ್ಲಿ ಧೋನಿ ಆಟ ನೋಡಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿರುತ್ತಾರೆ.
ಕೊರೊನಾ ಹಿನ್ನಲೆಯಲ್ಲಿ ಐಪಿಎಲ್ ಈ ಋತುವಿನ ಪಂದ್ಯಗಳನ್ನು ಮುಂದೂಡಲಾಗಿತ್ತು. ಈಗ ಮತ್ತೆ ಯುಎಇನಲ್ಲಿ ಐಪಿಎಲ್ ಮುಂದುವರೆದ ಪಂದ್ಯಗಳು ನಡೆಯಲಿವೆ. ಇದಕ್ಕೆ ಎಲ್ಲ ತಂಡಗಳು ಸಿದ್ಧತೆ ನಡೆಸಿವೆ. ಚೆನ್ನೈ ಸೂಪರ್ ಕಿಂಗ್ಸ್ ಕೂಡ ಐಪಿಎಲ್ ಮುಂದಿನ ಪಂದ್ಯಗಳಿಗೆ ಸಿದ್ಧತೆ ನಡೆಸಿವೆ. ಮಹೇಂದ್ರ ಸಿಂಗ್ ಧೋನಿ ತಯಾರಿ ಚುರುಕುಗೊಳಿಸಿದ್ದಾರೆ.
ಎಂಎಸ್ ಧೋನಿ ಪಂದ್ಯಾವಳಿಗೆ ಮುನ್ನ ಅತ್ಯುತ್ತಮ ಫಾರ್ಮ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಧೋನಿಯ ಬ್ಯಾಟಿಂಗ್ ವೀಡಿಯೋವನ್ನು ಚೆನ್ನೈ ಸೂಪರ್ ಕಿಂಗ್ಸ್ ಟ್ವೀಟ್ ಮಾಡಿದೆ. ವಿಡಿಯೋದಲ್ಲಿ ಧೋನಿ ಭರ್ಜರಿ ಬ್ಯಾಟಿಂಗ್ ಮಾಡ್ತಿದ್ದಾರೆ. ಯಾರ್ಕರ್ ಬಾಲ್ ಗೆ ಧೋನಿ, ಹೆಲಿಕಾಪ್ಟರ್ ಶಾಟ್ ಹೊಡೆದಿದ್ದಾರೆ. ಧೋನಿ ಈ ವಿಡಿಯೋ, ಅಭಿಮಾನಿಗಳಿಗೆ ಇಷ್ಟವಾಗಿದೆ. ಐಪಿಎಲ್ ನಲ್ಲಿ ಧೋನಿ ಆಟ ನೋಡಲು ಅಭಿಮಾನಿಗಳು ಉತ್ಸುಕರಾಗಿದ್ದಾರೆ.
ಧೋನಿ ಐಪಿಎಲ್ 2020 ರ 14 ಪಂದ್ಯಗಳಲ್ಲಿ ಕೇವಲ 25 ರ ಸರಾಸರಿಯಲ್ಲಿ 200 ರನ್ ಗಳಿಸಿದ್ದರು. ಸ್ಟ್ರೈಕ್ ರೇಟ್ ಕೇವಲ 116 ಆಗಿತ್ತು. ಐಪಿಎಲ್ 2021 ರಲ್ಲಿ ಕೂಡ, ಧೋನಿಯ ಬ್ಯಾಟಿಂಗ್ ಸರಾಸರಿ ಕೇವಲ 12.33 ಆಗಿತ್ತು. ಅವರು ಕೇವಲ 37 ರನ್ ಗಳಿಸಿದ್ದರು.