ಚೆನ್ನೈನಲ್ಲಿ ನಡೆದ ಐಪಿಎಲ್ 2021ರ ಹರಾಜು ಪ್ರಕ್ರಿಯೆಲ್ಲಿ ಕೆಲವು ದೊಡ್ಡ ಖರೀದಿಗಳು ಕ್ರಿಕೆಟ್ ಪ್ರಿಯರ ಗಮನ ಸೆಳೆದಿವೆ. ಇವುಗಳ ಪೈಕಿ 22ರ ಹರೆಯದ ಎಡಗೈ ವೇಗಿ ಚೇತನ್ ಸರ್ಕಾರಿಯಾ ಕೋಟಿ ರೂ.ಗೆ ಮಾರಾಟವಾಗಿದ್ದಾರೆ.
ದೇಸೀ ಕ್ರಿಕೆಟ್‌ನಲ್ಲಿ ಸೌರಾಷ್ಟ್ರ ತಂಡವನ್ನು ಪ್ರತಿನಿಧಿಸುವ ಸಕಾರಿಯಾರನ್ನು 1.2 ಕೋಟಿ ರೂ. ತೆತ್ತು ರಾಜಸ್ಥಾನ ರಾಯಲ್ಸ್ ಖರೀದಿಸಿದೆ. ಹರಾಜಿನಲ್ಲಿ ತಮಗೆ ಭಾರೀ ಮೌಲ್ಯ ಸಿಕ್ಕ ಕೂಡಲೇ ಸ್ನೇಹಿತರು/ಬಂಧುಗಳಿಂದ ಒಂದೇ ಸಮನೆ ಬರುತ್ತಿರುವ ಕರೆಗಳನ್ನು ಸ್ವೀಕರಿಸಿ ಉತ್ತರಿಸಿದ ಚೇತನ್, ಇದೇ ವೇಳೆ ಮನೆಗೆ ಬಂದು ಅಭಿನಂದಿಸಿದ ಪ್ರತಿಯೊಬ್ಬರನ್ನೂ ಸೌಜನ್ಯದಿಂದ ಮಾತನಾಡಿಸಿದ್ದಾರೆ.
ಸರ್ಕಾರಿ ನೌಕರರಿಗೆ ಎಲೆಕ್ಟ್ರಿಕ್ ವಾಹನ ಕಡ್ಡಾಯ: LPG ಗ್ಯಾಸ್ ಬದಲು ವಿದ್ಯುತ್ ಒಲೆಗೆ ಸಬ್ಸಿಡಿ, ಪೆಟ್ರೋಲ್ ಬದಲು ಎಲೆಕ್ಟ್ರಿಕ್ ವಾಹನ
ವೃತ್ತಿಯಲ್ಲಿ ಟೆಂಪೋ ಚಾಲಕರಾಗಿ ಕೆಲಸ ಮಾಡುತ್ತಿದ್ದ ಸಕಾರಿಯಾ ತಂದೆ ಎರಡು ವರ್ಷಗಳ ಹಿಂದೆ ತಮ್ಮ ಕೆಲಸಕ್ಕೆ ಗುಡ್‌ಬೈ ಹೇಳಿದ ಬಳಿಕ ಚೇತನ್ ಮನೆಯ ಪರಿಸ್ಥಿತಿ ಬಿಗಡಾಯಿಸಿತ್ತು. ಜೊತೆಯಲ್ಲಿ ಕಳೆದ ತಿಂಗಳಷ್ಟೇ ಚೇತನ್ ಕಿರಿಯ ಸಹೋದರನ ಅಗಲಿಕೆಯಿಂದ ಕುಟುಂಬಕ್ಕೆ ಭಾರೀ ಆಘಾತ ಬಿದ್ದಿತ್ತು. ಐದು ವರ್ಷಗಳ ಹಿಂದೆ ಈ ಕುಟುಂಬದ ಬಳಿ ಟಿವಿಯೂ ಇಲ್ಲದೇ ಇದ್ದ ಕಾರಣ ಸಕಾರಿಯಾ ಕ್ರಿಕೆಟ್ ಪಂದ್ಯಗಳನ್ನು ವೀಕ್ಷಿಸಲು ತಮ್ಮ ಸ್ನೇಹಿತರ ಮನೆಗಳಿಗೆ ಹೋಗುತ್ತಿದ್ದರು.
ಕಳೆದ ಐಪಿಎಲ್ ವೇಳೆ ಆರ್‌ಸಿಬಿ ತಂಡದ ನೆಟ್ ಬೌಲರ್ ಆಗಿ ಯುಎಇಗೆ ತೆರಳಿದ್ದ ಸರ್ಕಾರಿಯಾ, ತಮ್ಮ ಬೌಲಿಂಗ್ ಕೌಶಲ್ಯದಿಂದ ತಂಡದ ಕೋಚಿಂಗ್ ಸಿಬ್ಬಂದಿಯ ಗಮನ ಸೆಳೆದಿದ್ದರು.