alex Certify ಐಪಿಎಲ್ ಹರಾಜು: ಯಾವ ಆಟಗಾರರ ಮೇಲೆ ಯಾವ ಫ್ರಾಂಚೈಸಿ ಕಣ್ಣು….? ಇಲ್ಲಿದೆ ಡಿಟೇಲ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಐಪಿಎಲ್ ಹರಾಜು: ಯಾವ ಆಟಗಾರರ ಮೇಲೆ ಯಾವ ಫ್ರಾಂಚೈಸಿ ಕಣ್ಣು….? ಇಲ್ಲಿದೆ ಡಿಟೇಲ್ಸ್

Image result for ipl-2021-auction-csk-mi-punjab-kings-and-rr-potential-player-picks-and-remaining-purse

ಎಲ್ಲರ ಕಣ್ಣು ಈಗ ಚೆನ್ನೈ ಮೇಲಿದೆ. ಇಂದು ಚೆನ್ನೈನಲ್ಲಿ ಐಪಿಎಲ್ ಆಟಗಾರರ ಹರಾಜು ನಡೆಯಲಿದೆ. 292 ಆಟಗಾರರ ಹರಾಜು ನಡೆಯಲಿದ್ದು, 8 ಫ್ರಾಂಚೈಸಿಗಳಿಂದ 61 ಆಟಗಾರರನ್ನು ಆಯ್ಕೆ ಮಾಡಿಕೊಳ್ಳುವ ಸಾಧ್ಯತೆಯಿದೆ.

ಚೆನ್ನೈ ಸೂಪರ್ ಕಿಂಗ್ಸ್ 19.9 ಕೋಟಿ ರೂಪಾಯಿ ಉಳಿದಿದ್ದು, ಅದು 6 ಆಟಗಾರರನ್ನು ಖರೀದಿಸುವ ಸಾಧ್ಯತೆಯಿದೆ. ಸದ್ಯ ತಂಡದಲ್ಲಿ ಎಂ.ಎಸ್.ಧೋನಿ, ಸುರೇಶ್ ರೈನಾ, ಅಂಬಾಟಿ ರಾಯುಡು, ಕೆ.ಎಂ.ಆಸಿಫ್, ದೀಪಕ್ ಚಹರ್, ಡ್ವೇನ್ ಬ್ರಾವೋ, ಫಾಫ್ ಡು ಪ್ಲೆಸಿಸ್, ಇಮ್ರಾನ್ ತಾಹಿರ್, ಎನ್ ಜಗದೀಶನ್, ಕರ್ಣ್ ಶರ್ಮಾ, ಲುಂಗಿ ಎನ್‌ಜಿಡಿ, ಮಿಚೆಲ್ ಸಾಂಟ್ನರ್, ರವೀಂದ್ರ ಜಡೇಜಾ, ರುತುರಾಜ್ ಗಾಯಕ್ವಾಡ್, ಶಾರ್ದುಲ್ ಠಾಕೂರ್, ಸ್ಯಾಮ್ ಕರ್ರನ್, ಜೋಶ್ ಹ್ಯಾಜಲ್‌ವುಡ್, ಆರ್ ಸಾಯಿ ಕಿಶೋರ್ ತಂಡದಲ್ಲಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ಕೇದಾರ ಜಾಧವ್, ಮುರಳಿ ವಿಜಯ್, ಹರ್ಭಜನ್ ಸಿಂಗ್, ಪಿಯೂಷ್ ಚಾವ್ಲಾ, ಮೋನು ಸಿಂಗ್, ಶೇನ್ ವ್ಯಾಟ್ಸನ್ ರನ್ನು ಬಿಡುಗಡೆ ಮಾಡಿದೆ. ಸಿಎಸ್ಕೆ ಒಬ್ಬ ವಿದೇಶಿ ಆಟಗಾರನನ್ನು ಆಯ್ಕೆ ಮಾಡಿಕೊಳ್ಳುವ ಸಾಧ್ಯತೆಯಿದೆ.

ಸಿಎಸ್ಕೆ ಬ್ಯಾಟ್ಸ್‌ಮನ್‌ ಪಟ್ಟಿಯಲ್ಲಿ ಕರುಣ್ ನಾಯರ್, ಸ್ಟೀವ್ ಸ್ಮಿತ್, ಆಲ್‌ರೌಂಡರ್ ಮೊಯಿಸಸ್ ಹೆನ್ರಿಕ್ಸ್, ಶಿವಂ ಡ್ಯೂಬ್, ಬೌಲರ್‌ಗಳಾದ ಉಮೇಶ್ ಯಾದವ್, ಕೃಷ್ಣಪ್ಪ ಗೌತಮ್ ಮೇಲೆ ಕಣ್ಣಿಟ್ಟಿದೆ.

ಇನ್ನು ಮುಂಬೈ ಇಂಡಿಯನ್ಸ್ ಬಳಿ 15.35 ಕೋಟಿ ಇದ್ದು, 7 ಆಟಗಾರರನ್ನು ಆಯ್ಕೆ ಮಾಡುವ ಸಾಧ್ಯತೆಯಿದೆ. ಅದ್ರಲ್ಲಿ 4 ವಿದೇಶಿ ಆಟಗಾರರಿಗೆ ಸ್ಥಾನ ಸಿಗಲಿದೆ.

ರೋಹಿತ್ ಶರ್ಮಾ, ಕ್ವಿಂಟನ್ ಡಿ ಕಾಕ್, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಕ್ರಿಸ್ ಲಿನ್, ಅನ್ಮೋಲ್‌ಪ್ರೀತ್ ಸಿಂಗ್, ಸೌರಭ್ ತಿವಾರಿ, ಆದಿತ್ಯ ತಾರೆ, ಕೀರನ್ ಪೊಲಾರ್ಡ್, ಹಾರ್ದಿಕ್ ಪಾಂಡ್ಯ, ಕ್ರುನಾಲ್ ಪಾಂಡ್ಯ, ಅನುಕುಲ್ ರಾಯ್, ಜಸ್ಪ್ರೀತ್ ಬುಮ್ರಾ, ಜಹಂತ್ ಯಾದವ್, ಧವಲ್ ಕುಲಕರ್ಣಿ, ಮೊಹ್ಸಿನ್ ಖಾನ್  ಸದ್ಯ ತಂಡದಲ್ಲಿದ್ದಾರೆ.

ಮುಂಬೈ ಇಂಡಿಯನ್ಸ್ ಲಸಿತ್ ಮಾಲಿಂಗ, ನೇಥನ್ ಕೌಲ್ಟರ್ ನೈಲ್, ಜೇಮ್ಸ್ ಪ್ಯಾಟಿನ್ಸನ್, ಶೆರ್ಫೇನ್ ರುದರ್ ಪೊರ್ಡ್, ಮಿಚೆಲ್ ಮೆಕ್ಲೆನಗನ್, ದಿಗ್ವಿಜಯ್ ದೇಶ್ಮುಖ್, ಪ್ರಿನ್ಸ್ ಬಲ್ವಂತ್ ರೈರನ್ನು ತಂಡದಿಂದ ಬಿಡುಗಡೆ ಮಾಡಿದೆ.

ಬ್ಯಾಟ್ಸ್ ಮೆನ್ ಕರುಣ್ ನಾಯರ್, ಹನುಮ ವಿಹಾರಿ, ಟಾಮ್ ಬಾಂಟನ್, ಆಲ್‌ರೌಂಡರ್‌ಗಳಾದ ಗ್ಲೆನ್ ಮ್ಯಾಕ್ಸ್ ವೆಲ್, ಮೊಯೀನ್ ಅಲಿ, ಬೌಲರ್‌ಗಳಾದ ಮುಸ್ತಾಫಿಜುರ್ ರಹಮಾನ್, ಝೈ ರಿಚರ್ಡ್‌ಸನ್, ಪೃಥ್ವಿರಾಜ್ ಯರ್ರಾ ಆಯ್ಕೆ ಮಾಡುವ ಸಾಧ್ಯತೆಯಿದೆ.

ಇನ್ನು ಪಂಜಾಬ್ ಕಿಂಗ್ಸ್ ಬಳಿ 53.2 ಕೋಟಿ ಇದ್ದು, 9 ಆಟಗಾರರ ಪೈಕಿ 5 ವಿದೇಶಿ ಆಟಗಾರರ ಆಯ್ಕೆಗೆ ಅವಕಾಶವಿದೆ. ಪಂಜಾಬ್ ಕಿಂಗ್ಸ್, ಕೆ.ಎಲ್. ರಾಹುಲ್, ಕ್ರಿಸ್ ಗೇಲ್, ಮಾಯಾಂಕ್ ಅಗರ್ವಾಲ್, ನಿಕೋಲಸ್ ಪೂರನ್, ಮಂದೀಪ್ ಸಿಂಗ್, ಸರ್ಫರಾಜ್ ಖಾನ್, ದೀಪಕ್ ಹೂಡಾ, ಪ್ರಭಸೀಮ್ರಾನ್ ಸಿಂಗ್, ಮೊಹಮ್ಮದ್ ಶಮಿ, ಕ್ರಿಸ್ ಜೋರ್ಡಾನ್, ದರ್ಶನ್ ನಾಲ್ಕಂಡೆ, ರವಿ ಬಿಷ್ಣೋಯ್, ಮುರುಗನ್ ಅಶ್ವಿನ್, ಅರ್ಷ್‌ದೀಪ್ ಸಿಂಗ್, ಹರ್ಪ್ರೀತ್ ಬ್ರಾರ್, ಇಶಾನ್ ಪೊರೆಲ್ ರನ್ನು ಉಳಿಸಿಕೊಂಡಿದೆ.

IPL ಹರಾಜು: ಯಾರಿಗೆ ಎಷ್ಟು ಬೆಲೆ…? ಇಲ್ಲಿದೆ 292 ಆಟಗಾರರ ಸಂಪೂರ್ಣ ಪಟ್ಟಿ

ಗ್ಲೆನ್ ಮ್ಯಾಕ್ಸ್ ವೆಲ್, ಕರುಣ್ ನಾಯರ್, ಹಾರ್ಡಸ್ ವಿಲ್ಜೋಯೆನ್, ಜಗದೀಶ ಸುಚಿತ್, ಮುಜೀಬ್ ಉರ್ ರಹಮಾನ್, ಶೆಲ್ಡನ್ ಕಾಟ್ರೆಲ್, ಜೇಮ್ಸ್ ನೀಶಮ್, ಕೃಷ್ಣಪ್ಪ ಗೌತಮ್, ತಾಜಿಂದರ್ ಸಿಂಗ್ ರನ್ನು ತಂಡ ಬಿಡುಗಡೆ ಮಾಡಿದೆ.

ಬ್ಯಾಟ್ಸ್‌ಮನ್‌ ಡೇವಿಡ್ ಮಲನ್, ಆಲ್‌ರೌಂಡರ್‌ ಮೊಯಿಸಸ್ ಹೆನ್ರಿಕ್ಸ್, ಶಕೀಬ್ ಅಲ್ ಹಸನ್, ಟಾಮ್ ಕುರ್ರನ್, ಬೌಲರ್‌ಗಳಾದ ಪೃಥ್ವಿರಾಜ್ ಯರ್ರಾ, ಜಲಾಜ್ ಸಕ್ಸೇನಾ, ಪಿಯೂಷ್ ಚಾವ್ಲಾ, ಝೈ ರಿಚರ್ಡ್‌ಸನ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆಯಿದೆ.

ರಾಜಸ್ತಾನ್ ರಾಯಲ್ಸ್ ಬಳಿ 37.85 ಕೋಟಿ ರೂಪಾಯಿಯಿದ್ದು, 9 ಆಟಗಾರರನ್ನು ಆಯ್ಕೆ ಮಾಡಿಕೊಳ್ಳುವ ಸಾಧ್ಯತೆಯಿದೆ. ಸಂಜು ಸ್ಯಾಮ್ಸನ್, ಮಹಿಪಾಲ್ ಲೋಮರ್, ಮನನ್ ವೊಹ್ರಾ, ರಿಯಾನ್ ಪರಾಗ್, ಡೇವಿಡ್ ಮಿಲ್ಲರ್, ಮಾಯಾಂಕ್ ಮಾರ್ಕಂಡೆ, ಜೋಫ್ರಾ ಆರ್ಚರ್, ಶ್ರೇಯಾಸ್ ಗೋಪಾಲ್, ಜಯದೇವ್ ಉನಾದ್ಕಟ್, ಕಾರ್ತಿಕ್ ತ್ಯಾಗಿ, ಆಂಡ್ರ್ಯೂ ಟೈ, ಬೆನ್ ಸ್ಟೋಕ್ಸ್, ರಾಹುಲ್ ತೆವಾಟಿಯಾ, ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್ ಅವ್ರನ್ನು ಉಳಿಸಿಕೊಂಡಿದೆ.

ಸ್ಟೀವ್ ಸ್ಮಿತ್, ವರುಣ್ ಆರನ್, ಟಾಮ್ ಕುರ್ರನ್, ಅಂಕಿತ್ ರಾಜ್‌ಪೂತ್, ಅನಿರುದ್ಧ ಜೋಶಿ, ಶಶಾಂಕ್ ಸಿಂಗ್, ಓಶೇನ್ ಥಾಮಸ್, ಆಕಾಶ್ ಸಿಂಗ್ರನ್ನು ಬಿಡುಗಡೆ ಮಾಡಿದೆ.

ಅಲೆಕ್ಸ್ ಹೇಲ್ಸ್, ಶಕೀಬ್ ಅಲ್ ಹಸನ್, ಶಿವಮ್ ಡ್ಯೂಬ್, ಕ್ರಿಸ್ ಮೋರಿಸ್, ಉಮೇಶ್ ಯಾದವ್, ಕೈಲ್ ಜೇಮೀಸನ್ರನ್ನು ಆಯ್ಕೆ ಮಾಡಿಕೊಳ್ಳುವ ಸಾಧ್ಯತೆಯಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...