ಭಾರತೀಯ ತೈಲ ನಿಗಮ (ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್) ಟೆಕ್ನಿಷಿಯನ್, ಗ್ರಾಜುಯೇಟ್ ಮತ್ತು ಟ್ರೇಡ್ ಅಪ್ರೆಂಟಿಸ್ (ತಾಂತ್ರಿಕ ಮತ್ತು ತಾಂತ್ರಿಕೇತರ) ಹುದ್ದೆಗೆ ನೇಮಕಾತಿಗಾಗಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ.
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ iocl.com ನಲ್ಲಿ ಖಾಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ಅರ್ಹತಾ ಮಾನದಂಡಗಳು, ವಯಸ್ಸಿನ ಮಿತಿ, ಖಾಲಿ ಹುದ್ದೆಗಳು ಮತ್ತು ಹೆಚ್ಚಿನದನ್ನು ಇಲ್ಲಿ ಪರಿಶೀಲಿಸಬಹುದು.
ಆನ್‌ಲೈನ್ ಅರ್ಜಿಯ ಪ್ರಾರಂಭ- ಡಿಸೆಂಬರ್ 14, 2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜನವರಿ 3, 2023
ಒಟ್ಟು 1760 ಹುದ್ದೆಗಳನ್ನು ಭರ್ತಿ ಮಾಡಲಾಗುವುದು
ಅರ್ಹತಾ ಮಾನದಂಡಗಳು:
ಶೈಕ್ಷಣಿಕ ಅರ್ಹತೆ:
ಟ್ರೇಡ್ ಅಪ್ರೆಂಟಿಸ್ – NCVT/SCVT ಯಿಂದ ಗುರುತಿಸಲ್ಪಟ್ಟ ನಿಯಮಿತ ಪೂರ್ಣ ಸಮಯದ 2(ಎರಡು) ವರ್ಷದ ITI ಕೋರ್ಸ್‌ನೊಂದಿಗೆ ಮೆಟ್ರಿಕ್ ಮುಗಿಸಿರಬೇಕು.
ಟೆಕ್ನಿಷಿಯನ್ ಅಪ್ರೆಂಟಿಸ್ (ಮೆಕ್ಯಾನಿಕಲ್) -3 ವರ್ಷಗಳ ನಿಯಮಿತ ಪೂರ್ಣ ಸಮಯದ ಇಂಜಿನಿಯರಿಂಗ್ ಡಿಪ್ಲೊಮಾ ಮುಗಿಸಿರಬೇಕು ಸಾಮಾನ್ಯ, EWS ಮತ್ತು OBC-NCL ಶೇ 50 ಅಂಕ ಮತ್ತು SC/ST/PwBD ಅಭ್ಯರ್ಥಿಗಳು ಶೇ 45 ಅಂಕ ಗಳಿಸಿರಬೇಕು.
ಪದವೀಧರ ಅಪ್ರೆಂಟಿಸ್ (BA/B. Com/B. Sc.) – ಸಾಮಾನ್ಯ, EWS ಮತ್ತು OBC-NCL ಶೇ.50 ಮತ್ತು SC/ST/PwBD ಅಭ್ಯರ್ಥಿಗಳಿಗೆ ಒಟ್ಟಾರೆಯಾಗಿ ಕನಿಷ್ಠ ಶೇ.45 ಅಂಕಗಳೊಂದಿಗೆ ಯಾವುದೇ ವಿಭಾಗದಲ್ಲಿ ನಿಯಮಿತ ಪೂರ್ಣ ಸಮಯದ ಪದವಿಯನ್ನು ಮಾನ್ಯತೆ ಪಡೆದ ಸಂಸ್ಥೆ/ವಿಶ್ವವಿದ್ಯಾಲಯದಿಂದ ಪಡೆದಿರಬೇಕು.
ಟ್ರೇಡ್ ಅಪ್ರೆಂಟಿಸ್ – ಡಾಟಾ ಎಂಟ್ರಿ ಆಪರೇಟರ್ (ಫ್ರೆಶರ್): ಸಾಮಾನ್ಯ, EWS ಮತ್ತು OBC-NCL ಶೇ 50 ಹಾಗೂ SC/ST/PwBD ಅಭ್ಯರ್ಥಿಗಳು ಶೇ.45 ಅಂಕಗಳನ್ನು ಪಡೆದು 12 ನೇ ತರಗತಿಯನ್ನು ಮಾನ್ಯತೆ ಪಡೆದ ಸಂಸ್ಥೆಯಿಂದ ಪಡೆದಿರಬೇಕು.
ಅದೆ ರೀತಿ ಟ್ರೇಡ್ ಅಪ್ರೆಂಟಿಸ್ – ರಿಟೇಲ್ ಸೇಲ್ಸ್ ಅಸೋಸಿಯೇಟ್ ಹುದ್ದೆಗೂ ಕರೆಯಲಾಗಿದೆ. ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಡಿಸೆಂಬರ್ 31, 2022 ರಂತೆ 18 ರಿಂದ 24 ವರ್ಷ ವಯಸ್ಸಿನವರಾಗಿರಬೇಕು. ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್ https://iocl.com/latest-job-opening ನೋಡಬಹುದು.