2024-25ನೇ ಸಾಲಿನ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿ ಪದಕ ವಿಜೇತರಾದ ಕ್ರೀಡಾಪಟುಗಳಿಗೆ ಶೈಕ್ಷಣಿಕ ಶುಲ್ಕ ಮರುಪಾವತಿಗಾಗಿ ಅರ್ಹ ಕ್ರೀಡಾಪಟುಗಳಿಂದ ಸೆಪ್ಟೆಂಬರ್ 27 ರ ಒಳಗಾಗಿ ಅರ್ಜಿಗಳನ್ನು ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮುಖಾಂತರ ಸಲ್ಲಿಸುವಂತೆ ಅವಕಾಶ ಕಲ್ಪಿಸಲಾಗಿದೆ.
ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ರಾಜ್ಯ ಮತ್ತು ಅಂತಾರಾಷ್ಟ್ರೀಯ ಕ್ರೀಡೆಗಳಲ್ಲಿ ಭಾಗವಹಿಸಿ ವಿಜೇತರಾದ ಕ್ರೀಡಾಪಟುಗಳಿಗೆ ಶೈಕ್ಷಣಿಕ ಶುಲ್ಕವನ್ನು ಇಲಾಖೆಯಿಂದ ಮರುಪಾವತಿ ಮಾಡುವ ಮೂಲಕ ಪ್ರತಿಭಾವಂತ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುವುದು ಸರ್ಕಾರದ ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
ಒಲಂಪಿಕ್ ಗೇಮ್ /ಪ್ಯಾರಾ ಒಲಂಪಿಕ್ ಗೇಮ್ಸ್, ವರ್ಲ್ಡ್ ಗೇಮ್ಸ್/ಚಾಂಪಿಯನ್ ಷಿಪ್, ಏಷಿಯನ್ ಗೇಮ್ಸ್/ಪ್ಯಾರಾ ಏಷಿಯನ್ ಗೇಮ್ಸ್, ಕಾಮನ್ವೇಲ್ತ್ ಗೇಮ್ಸ್, ಏಷಿಯನ್ ಚಾಂಪಿಯನ್ ಷಿಪ್, ಕಾಮನ್ವೆಲ್ತ್ ಚಾಂಪಿಯನ್ ಷಿಪ್, ಎಸ್ಎಎಫ್ ಗೇಮ್ಸ್, ಮಾನ್ಯತೆ ಹೊಂದಿದ ಅಂತಾರಾಷ್ಟ್ರೀಯ ಕ್ರೀಡಾಕೂಟಗಳು (Non Ranking Competitions), ರಾಷ್ಟ್ರೀಯ ಕ್ರೀಡಾಕೂಟ, ಸ್ಕೂಲ್ ಗೇಮ್ ಫೆಡರೇಷನ್ ಆಫ್ ಇಂಡಿಯಾ, ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಕ್ರೀಡಾಕೂಟ, ರಾಷ್ಟ್ರೀಯ ಚಾಂಪಿಯನ್ ಷಿಪ್, ವಿಶ್ವವಿದ್ಯಾಲಯ ಕ್ರೀಡಾಕೂಟ, ಅಖಿಲ ಭಾರತ ಅಂತರ ವಲಯ ಕ್ರೀಡಾಕೂಟ, ಭಾರತ ಸರ್ಕಾರದ ಅಂಗೀಕೃತ ಕ್ರೀಡಾ ಫೆಡರೇಷನ್ನಿಂದ ಸಂಘಟಿಸಲಾದ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳು /ಶಾಲಾ ಮಟ್ಟದ ಚಾಂಪಿಯನ್ ಷಿಪ್ ಖೇಲೋ ಇಂಡಿಯಾ ಕ್ರೀಡಾಕೂಟಗಳು. ಈ ಕ್ರೀಡೆಗಳಲ್ಲಿ ಭಾಗವಹಿಸಿ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಈ ಯೋಜನೆ ಅನ್ವಯವಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಆಯಾ ಜಿಲ್ಲೆಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯನ್ನು ಸಂಪರ್ಕಿಸಬಹುದಾಗಿದೆ.