ಶೇರುಪೇಟೆಯಲ್ಲಿನ ಬೆಳವಣಿಗೆ ಹೂಡಿಕೆದಾರರಿಗೆ ಖುಷಿ ತಂದಿದ್ದು, ಕಳೆದ ಮೂರು ದಿನಗಳಲ್ಲಿ ಹೂಡಿಕೆದಾರರಿಗೆ ಅಂದಾಜು 5.03 ಲಕ್ಷ ಕೋಟಿ ರೂ.ನಷ್ಟು ಸಂಪತ್ತು ಹೆಚ್ಚಾಗಿದೆ.
ಬಿಎಸ್ಇ ನಲ್ಲಿ 30-ಷೇರುಗಳ ಬೆಂಚ್ ಮಾರ್ಕ್ 76.72 ಪಾಯಿಂಟ್ ಗಳಿಗೆ ತಲುಪಿದ್ದು, ಸೋಮವಾರ ದಾಖಲೆಯ 60,13.78ಕ್ಕೆ ತಲುಪಿದೆ. ಇದರಿಂದ ಹೂಡಿಕೆದಾರರ ಸಂಪತ್ತು 5,03,649.75 ಕೋಟಿಯಷ್ಟು ಏರಿದೆ.
ಬಾಲಕನಿಂದ ದುಡುಕಿನ ನಿರ್ಧಾರ, ಕೊನೆಯ ಆಸೆ ಈಡೇರಿಸಲು ಡೆತ್ ನೋಟ್ ನಲ್ಲಿ ಮೋದಿಗೆ ಮನವಿ
ದೇಶೀಯ ಮಾರುಕಟ್ಟೆಯ ಬ್ಯಾಂಕಿಂಗ್, ವಿದ್ಯುತ್, ರಿಯಾಲ್ಟಿ, ಆಟೋಮೊಬೈಲ್ ಕ್ಷೇತ್ರಗಳಲ್ಲಿನ ಜಿಗಿತದಿಂದ ಈ ಬೆಳವಣಿಗೆ ಕಾಣಿಸಿದೆ ಎಂದು ಜಿಯೋಜಿತ್ ಫೈನಾನ್ಶಿಯಲ್ ಸರ್ವಿಸಸ್ ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್ ಅಭಿಪ್ರಾಯ ನೀಡಿದ್ದಾರೆ.
ಫ್ರಂಟ್ ಲೈನ್ ಕಂಪನಿಗಳ ಸಾಲಿನಲ್ಲಿ ಮಾರುತಿ ಅತಿ ದೊಡ್ಡ ಲಾಭ ಪಡೆದಿದೆ. ನಂತರದಲ್ಲಿ ಪವರ್ ಗ್ರಿಡ್, ಐಟಿಸಿ, ಎನ್ಟಿಪಿಸಿ ಕೂಡ ಇದೇ ಸಾಲಿನಲ್ಲಿದೆ. ಹಾಗೆಯೇ ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಸೂಚ್ಯಂಕಗಳು ಶೇ.0.60ರಷ್ಟು ಏರಿಕೆಯಾಗಿದೆ.