
ಪಿಂಚಣಿ ಯೋಜನೆ, ಮ್ಯೂಚುವಲ್ ಫಂಡ್‌ಗಳು ಅಥವಾ ಸ್ಥಿರ ಠೇವಣಿಗಳ ಮೇಲೆ ಹೂಡಿಕೆ ಮಾಡಲು ಚಿಂತಿಸುತ್ತಿದ್ದೀರಾ ? ನಿಮ್ಮ ಹೂಡಿಕೆಯನ್ನು ಈ ಸ್ಕೀಂಗಳಲ್ಲಿ ದುಪ್ಪಟ್ಟು ಮಾಡಲು ಎಷ್ಟು ಸಮಯ ಬೇಕಾಗಬಹುದು ಎಂಬುದು ನಿಮ್ಮ ಆಲೋಚನೆಯೇ ?
ಭಾರತದಲ್ಲಿ ಹೂಡಿಕೆ ಮಾಡಲು ಬಹಳ ಅವಕಾಶಗಳಿದ್ದು, ನಿಗದಿತ ಕಾಲಾವಕಾಶದಲ್ಲಿ ನಿಮ್ಮ ದುಡ್ಡನ್ನು ದುಪ್ಪಟ್ಟು ಮಾಡಬಲ್ಲ ಅನೇಕ ಆಯ್ಕೆಗಳಿವೆ. ಆದರೆ, ಕೆಲವೊಂದು ಹೂಡಿಕೆ ಆಯ್ಕೆಗಳು ಮಿಕ್ಕವುಗಳಿಗಿಂತ ಸುರಕ್ಷಿತವಾಗಿದ್ದು, ನಿಮ್ಮ ಹೂಡಿಕೆ ದುಪ್ಪಟ್ಟಾಗಲು ಸ್ವಲ್ಪ ಹೆಚ್ಚಿನ ಕಾಲಾವಧಿ ಬೇಕಾಗಬಹುದು.
ONLINE ವಂಚನೆಗೊಳಗಾಗಿ ಹಣ ಕಳೆದುಕೊಂಡಿದ್ದೀರಾ..? ಹಾಗಾದ್ರೆ ಮರಳಿ ಪಡೆಯಲು ಇಲ್ಲಿದೆ ಟಿಪ್ಸ್
ನಿಮ್ಮ ದುಡ್ಡು ದುಪ್ಪಟ್ಟಾಗಲು ಬೇಕಾಗುವ ಕಾಲಾವಧಿಯನ್ನು ಈಗ ನೀವು ಸುಲಭವಾಗಿ ಲೆಕ್ಕಾಚಾರ ಮಾಡಬಹುದಾಗಿದೆ. ಇದಕ್ಕಾಗಿ ನೀವು ನಿಯಮ 72 ಅನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ.
ನಿಯಮ 72 ಒಂದು ಸರಳವಾದ ಗಣಿತ ಸೂತ್ರವಾಗಿದೆ. ನಿಮ್ಮ ಹೂಡಿಕೆ ಮೇಲೆ ಬರುವ ಬಡ್ಡಿಯಿಂದ 72ನ್ನು ಭಾಗಿಸಿದರೆ, ನಿಮ್ಮ ಹೂಡಿಕೆ ದುಪ್ಪಟ್ಟಾಗಲು ಬೇಕಾದ ಸಮಯವನ್ನು ಅಂದಾಜಿಸಬಹುದಾಗಿದೆ.
BIG NEWS: ಕೃಷಿ ಭೂಮಿ ಪರಿವರ್ತನೆಗೆ ಇನ್ನು ಹೊಸ ವ್ಯವಸ್ಥೆ
ಹೀಗಿದೆ ಆ ಲೆಕ್ಕಾಚಾರ:
ಹೂಡಿಕೆ ದುಪ್ಪಟ್ಟಾಗಲು ಬೇಕಾದ ಸಮಯ = 72/ಯೋಜನೆಯಲ್ಲಿ ಕೊಡಮಾಡಿದ ಬಡ್ಡಿದರ
ಇಗೋ ಇಲ್ಲಿದೆ ಉದಾಹರಣೆ:
ನೀವು ರಾಷ್ಟ್ರೀಯ ಪಿಂಚಣಿ ಯೋಜನೆ ಮೇಲೆ ಒಂದು ಲಕ್ಷ ರೂಪಾಯಿ ಹೂಡಿಕೆ ಮಾಡುತ್ತಿದ್ದು, 9% ಬಡ್ಡಿದರ ಪಡೆಯುತ್ತಿದ್ದರೆ, ನಿಮ್ಮ ದುಡ್ಡನ್ನು ದುಪ್ಪಟ್ಟು ಮಾಡಲು ಬೇಕಾದ ಸಮಯವನ್ನು ಹೀಗೆ ಲೆಕ್ಕಾಚಾರ ಮಾಡಬಹುದಾಗಿದೆ.
ಇಲ್ಲಿದೆ ಅನ್ಯಗ್ರಹ ಜೀವಿಗಳಿರುವ ‘ಏರಿಯಾ 51’ರ ಬಗ್ಗೆ ಕುತೂಹಲ ಮಾಹಿತಿ
ಕಾಲಾವಧಿ: 72/9 = 8 ವರ್ಷಗಳು.
ಹೂಡಿಕೆಯ ಇತರೆ ಸ್ಕೀಂಗಳಿಗೂ ಸಹ ಈ ಸರಳ ಸೂತ್ರವನ್ನು ನೀವು ಅನ್ವಯಿಸಬಹುದಾಗಿದೆ.