ಬೆಂಗಳೂರು: ಬೆಂಗಳೂರಿನಲ್ಲಿ ಇಬ್ಬರು ಶಂಕಿತ ಉಗ್ರರ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಉಗ್ರ ಅಖ್ತರ್ ಹುಸೇನ್ ಮೊಬೈಲ್ ನಲ್ಲಿ ಸ್ಪೋಟಕ ಮಾಹಿತಿ ಲಭ್ಯವಾಗಿದೆ.
5 -6 ಗ್ರೂಪ್ ಗಳಲ್ಲಿ ಅಕ್ತರ್ ಹುಸೇನ್ ಇರುವುದು ತಿಳಿದು ಬಂದಿದೆ. ಈ ಗ್ರೂಪ್ ಗಳಲ್ಲಿ ಬಾಂಗ್ಲಾದೇಶ, ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಕಾಶ್ಮೀರದ ವ್ಯಕ್ತಿಗಳು ಇದ್ದಾರೆ. ಒಂದೊಂದು ಗ್ರೂಪ್ ನಲ್ಲಿ 20 ರಿಂದ 25 ಜನರು ಇರುವುದು ಗೊತ್ತಾಗಿದೆ. ಕೆಲವು ದಾಖಲೆಗಳು ಮೊಬೈಲ್ ನಲ್ಲಿ ಡಿಲೀಟ್ ಆಗಿರುವ ಶಂಕೆ ಹಿನ್ನೆಲೆಯಲ್ಲಿ ಡಾಟಾ ರೀಟ್ರಿವ್ ಮಾಡಲು ಸಿಸಿಬಿ ಟೀಮ್ ಯತ್ನ ನಡೆಸಿದೆ. ತನಿಖೆ ತೀವ್ರಗೊಳಿಸಲಾಗಿದೆ.