alex Certify ಪ್ರತಿ ದಿನ 7 ರೂ. ಉಳಿಸಿ ತಿಂಗಳಿಗೆ ಪಡೆಯಿರಿ 5 ಸಾವಿರ ರೂ. | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರತಿ ದಿನ 7 ರೂ. ಉಳಿಸಿ ತಿಂಗಳಿಗೆ ಪಡೆಯಿರಿ 5 ಸಾವಿರ ರೂ.

ಪ್ರತಿಯೊಬ್ಬರಿಗೂ ವೃದ್ಧಾಪ್ಯದ ಚಿಂತೆ ಕಾಡುತ್ತದೆ. ವೃದ್ಧಾಪ್ಯದಲ್ಲಿ ಹಣಕಾಸಿನ ಸಮಸ್ಯೆ ಆಗದಿರಲಿ ಎನ್ನುವ ಕಾರಣಕ್ಕೆ ಅನೇಕರು ಸುರಕ್ಷಿತ ಹೂಡಿಕೆ ಮಾಡ್ತಾರೆ. ನೀವೂ ಹೂಡಿಕೆ ಆಲೋಚನೆಯಲ್ಲಿದ್ದರೆ ಸರ್ಕಾರದ ಅಟಲ್ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಅಟಲ್ ಪಿಂಚಣಿ ಯೋಜನೆಯನ್ನು 2015 ರಲ್ಲಿ ಪ್ರಾರಂಭಿಸಲಾಯಿತು. ಆ ಸಮಯದಲ್ಲಿ ಇದನ್ನು ಅಸಂಘಟಿತ ವಲಯಗಳಲ್ಲಿ ಕೆಲಸ ಮಾಡುವ ಜನರಿಗೆ ನೀಡಲಾಗ್ತಿತ್ತು. ಈಗ 18 ರಿಂದ 40 ವರ್ಷ ವಯಸ್ಸಿನ ಯಾವುದೇ ಭಾರತೀಯ ನಾಗರಿಕರು ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ಪಿಂಚಣಿ ಪಡೆಯಬಹುದು.

ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ಖಾತೆ ಹೊಂದಿರುವವರು ಇದ್ರಲ್ಲಿ ಹೂಡಿಕೆ ಮಾಡಬಹುದು. ಈ ಯೋಜನೆಯಲ್ಲಿ ಠೇವಣಿದಾರರು 60 ವರ್ಷಗಳ ನಂತರ ಪಿಂಚಣಿ ಪಡೆಯಲು ಪ್ರಾರಂಭಿಸುತ್ತಾರೆ. ಅಟಲ್ ಪಿಂಚಣಿ ಯೋಜನೆಯಲ್ಲಿ ಮಾಡುವ ಹೂಡಿಕೆ ವಯಸ್ಸನ್ನು ಅವಲಂಬಿಸಿರುತ್ತದೆ. ಕನಿಷ್ಟ ಮಾಸಿಕ 1,000 ರೂಪಾಯಿಯಾಗಿದ್ದು ಗರಿಷ್ಠ 5,000 ರೂಪಾಯಿಯಾಗಿದೆ. ಉಳಿತಾಯ ಖಾತೆ, ಆಧಾರ್ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಯನ್ನು ದಾಖಲೆ ರೂಪದಲ್ಲಿ ನೀಡಬೇಕು.

ಒಬ್ಬರು ಒಂದು ಅಟಲ್ ಪಿಂಚಣಿ ಖಾತೆಯನ್ನು ಮಾತ್ರ ಹೊಂದಬಹುದು. 18 ನೇ ವಯಸ್ಸಿನಲ್ಲಿ ಅಟಲ್ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡಲು ಶುರು ಮಾಡಿದ್ರೆ 60 ವರ್ಷದ ನಂತರ, ಪ್ರತಿ ತಿಂಗಳು 5000 ರೂಪಾಯಿಗಳ ಮಾಸಿಕ ಪಿಂಚಣಿ ಸಿಗುತ್ತದೆ. ಇದಕ್ಕೆ ತಿಂಗಳಿಗೆ ಕೇವಲ 210 ರೂಪಾಯಿ ಹೂಡಿಕೆ ಮಾಡಬೇಕಾಗುತ್ತದೆ.

ಈ ಯೋಜನೆಗಾಗಿ  ಪ್ರತಿದಿನ 7 ರೂಪಾಯಿಗಳನ್ನು ಜಮಾ ಮಾಡಿದರೆ ತಿಂಗಳಿಗೆ 5000 ರೂಪಾಯಿಗಳ ಪಿಂಚಣಿ ಪಡೆಯಬಹುದು.  ಪ್ರತಿ ತಿಂಗಳು 1000 ರೂಪಾಯಿಗಳ ಮಾಸಿಕ ಪಿಂಚಣಿ ಬೇಕೆನ್ನುವವರು ತಿಂಗಳಿಗೆ ಕೇವಲ 42 ರೂಪಾಯಿಗಳನ್ನು ಜಮಾ ಮಾಡಬೇಕಾಗುತ್ತದೆ. ಅಟಲ್ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡುವ ಜನರು ಆದಾಯ ತೆರಿಗೆ ಕಾಯ್ದೆ 80 ಸಿ ಅಡಿಯಲ್ಲಿ 1.5 ಲಕ್ಷ ರೂಪಾಯಿಗಳವರೆಗೆ ತೆರಿಗೆ ಪ್ರಯೋಜನವನ್ನು ಪಡೆಯುತ್ತಾರೆ.

ಯೋಜನೆ ಪಡೆದ ವ್ಯಕ್ತಿ 60 ವರ್ಷಗಳ ಮೊದಲೇ ಸತ್ತರೆ, ಅವರ ಪತ್ನಿ/ ಪತಿ ಈ ಯೋಜನೆಯಲ್ಲಿ ಹಣ ಠೇವಣಿ ಮಾಡುವುದನ್ನು ಮುಂದುವರಿಸಬಹುದು. 60 ವರ್ಷಗಳ ನಂತರ ಪ್ರತಿ ತಿಂಗಳು ಪಿಂಚಣಿ ಪಡೆಯಬಹುದು.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...