ನಾಗಾಲ್ಯಾಂಡ್ ಸಚಿವ ತೆಮ್ಜೆನ್ ಇಮ್ನಾ ಅಲೋಂಗ್ ಅವರ ಹಾಸ್ಯಪ್ರಜ್ಞೆಯು ಅಂತರ್ಜಾಲದಲ್ಲಿ ವೈರಲ್ ಆಗಿದೆ. ಅವರ ‘ಸಣ್ಣ ಕಣ್ಣು’ ಎಂಬ ತಮಾಷೆಗಾಗಿ ಸಾಕಷ್ಟು ಮೆಚ್ಚುಗೆಯನ್ನು ಗಳಿಸಿದ ನಂತರ, ನಾಗಾಲ್ಯಾಂಡ್ ಸಚಿವರು ಮತ್ತೊಮ್ಮೆ ಚರ್ಚೆಯ ಬಿಂದುವಾಗಿದ್ದಾರೆ. ಅದ್ಯಾಕೆ ಅಂತಾ ಅಚ್ಚರಿ ಪಡುತ್ತಿದ್ದೀರಾ..? ಏನು ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ನಿಮ್ಮಲ್ಲಿದ್ದಲ್ಲಿ ಮುಂದೆ ಓದಿ.
ತೆಮ್ಜೆನ್ ಇಮ್ನಾ ಟ್ವಿಟ್ಟರ್‌ನಲ್ಲಿ ಸ್ಕ್ರೀನ್‌ಶಾಟ್ ಅನ್ನು ಟ್ವೀಟ್ ಮಾಡಿದ್ದಾರೆ. ಅದು ಅವರ ಹೆಸರಿನ ಗೂಗಲ್ ಹುಡುಕಾಟ ಫಲಿತಾಂಶಗಳನ್ನು ತೋರಿಸುತ್ತದೆ. ಅವರ ವಯಸ್ಸಿನ ಬಗ್ಗೆ ತಿಳಿದುಕೊಳ್ಳಲು ನೆಟ್ಟಿಗರು ಬಯಸಿದ್ದಲ್ಲದೆ, ಅವರ ಹೆಂಡತಿಯ ಬಗ್ಗೆ ಮಾಹಿತಿ ಪಡೆಯಲು ಕಾತುರರಾಗಿದ್ದರು.
ಹೌದು, ನಾಗಾಲ್ಯಾಂಡ್ ಸಚಿವರ ವಯಸ್ಸು ಮತ್ತು ಜೀವನ ಜೊತೆಗೆ, ಅಲೋಂಗ್ ಅವರ ಹೆಂಡತಿಯ ಬಗ್ಗೆ ತಿಳಿದುಕೊಳ್ಳಲು ಇಂಟರ್ನೆಟ್ ತುಂಬಾ ಉತ್ಸುಕವಾಗಿದೆ ಎಂದು ಕಂಡುಬಂದಿದೆ. ಆದರೆ, ತಾವು ಒಬ್ಬಂಟಿಯಾಗಿರುವುದಾಗಿ ಜಗತ್ತಿಗೆ ತಿಳಿಸಿದ್ರು. ತಾನು ಅವಳನ್ನು ಇನ್ನೂ ಹುಡುಕುತ್ತಿರುವುದಾಗಿ ತಮಾಷೆಯಾಗಿ ಸಚಿವರು ಟ್ವೀಟ್ ಮಾಡಿದ್ದಾರೆ.
ಅಲೋಂಗ್ ಅವರ ಹಾಸ್ಯ ಪ್ರಜ್ಞೆಯು ಇಂಟರ್ನೆಟ್ ಅನ್ನು ನಗೆಗಡಲಲ್ಲಿ ತೇಲಿಸಿದೆ. ಅವರ ಹಾಸ್ಯಭರಿತ ಹೇಳಿಕೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಂದಹಾಗೆ, ತೆಮ್ಜೆನ್ ಇಮ್ನಾ ಅಲೋಂಗ್ ಅವರು ನಾಗಾಲ್ಯಾಂಡ್ ನ ಉನ್ನತ ಶಿಕ್ಷಣ ಮತ್ತು ಬುಡಕಟ್ಟು ವ್ಯವಹಾರಗಳ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
https://twitter.com/Manikan74446606/status/1546101329252077569?ref_src=twsrc%5Etfw%7Ctwcamp%5Etweetembed%7Ctwterm%5E1546101329252077569%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Finternet-wanted-to-know-about-nagaland-minister-s-wife-you-don-t-want-to-miss-his-witty-response-1974170-2022-07-11