ಕೆಲವೊಮ್ಮೆ ಎಷ್ಟೇ ದುಃಖದಲ್ಲಿ ಇದ್ದರೂ ಒಳ್ಳೆಯ ಸಂಗೀತವನ್ನು ಕೇಳಿದರೆ ಮನಸ್ಸು ಪ್ರಫುಲ್ಲಗೊಳ್ಳುತ್ತದೆ. ಅಂಥದ್ದೇ ಒಂದು ಮನಸ್ಸನ್ನು ಉಲ್ಲಾಸಭರಿತವಾಗಿಸುವ ವಿಡಿಯೋ ಒಂದು ವೈರಲ್ ಆಗಿದೆ.
ಸತ್ಸಂಗದಲ್ಲಿ (ಧಾರ್ಮಿಕ ಕೂಟ) ಭಜನೆ ಹಾಡುವ ಚಿಕ್ಕ ಹುಡುಗಿಯ ಈ ಹಾಡು ಕೇಳಿದರೆ ಮನಸ್ಸು ಹಗುರವಾಗುತ್ತದೆ. ಈಕೆಯ ಹಾಡನ್ನು ಟ್ವಿಟರ್‌ನಲ್ಲಿ ಹಂಚಿಕೊಳ್ಳಲಾಗಿದ್ದು, ಸುಮಾರು 20 ಸಾವಿರ ವೀಕ್ಷಣೆಗಳನ್ನು ಹೊಂದಿದೆ. ಹುಡುಗಿಯ ಮುದ್ದಾದ ವರ್ತನೆಗಳು ನೆಟ್ಟಿಗರ ಹೃದಯ ಗೆದ್ದಿದೆ.
ಶಾಲಾ ಸಮವಸ್ತ್ರವನ್ನು ಧರಿಸಿರುವ ಪುಟ್ಟ ಬಾಲಕಿಯು ಹಲವಾರು ಭಜನೆಗಳನ್ನು ಇತರ ಮಹಿಳೆಯರೊಂದಿಗೆ ಹಾಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಮನೆಯೊಂದರಲ್ಲಿ ಸೇರಿದ್ದ ಸಭೆಯನ್ನು ಈಕೆಯೇ ಮುನ್ನಡೆಸಿಕೊಂಡು ಹೋಗಿದ್ದಾಳೆ. ಆರಂಭದಲ್ಲಿ ಈಕೆ ಹಾಡಿದರೆ, ಸಭೆಯ ಉಳಿದವರು ಅವಳನ್ನು ಹಿಂಬಾಲಿಸಿರುವುದನ್ನು ವಿಡಿಯೋದಲ್ಲಿ ನೋಡಬಹುದು.