ಆಪ್ಟಿಕಲ್ ಭ್ರಮೆಗಳು ಸಾಮಾಜಿಕ ಮಾಧ್ಯಮದಲ್ಲಿ ಇತ್ತೀಚೆಗೆ ಟ್ರೆಂಡಿಂಗ್ ಆಗಿವೆ. ಮಾಡಲು ಏನು ಕೆಲಸವಿಲ್ಲದಾಗ, ಮೆದುಳಿಗೆ ಸ್ವಲ್ಪ ಕೆಲಸ ಕೊಟ್ರೆ ವ್ಯಾಯಾಮ ಮಾಡಿದಂತಾಗುತ್ತದೆ. ಇದೀಗ ಬಂಡೆಕಲ್ಲುಗಳ ಮಧ್ಯೆ ಬಾಲಕಿಯೊಬ್ಬಳು ಇರುವಿಕೆಯನ್ನು ಮಾರೆಮಾಚಿರುವ ಫೋಟೋ ಮತ್ತೆ ವೈರಲ್ ಆಗಿದೆ.
ಬಂಡೆಕಲ್ಲುಗಳ ಮಧ್ಯೆ ಬಾಲಕಿಯಿರುವ ಚಿತ್ರವನ್ನು 2016 ರಲ್ಲಿ ಪೋಸ್ಟ್ ಮಾಡಲಾಗಿದ್ದು, ಇದೀಗ ಮತ್ತೆ ಕಾಣಿಸಿಕೊಂಡಿದೆ. ಚಿತ್ರವು ಅದ್ಭುತವಾದ ಬಂಡೆಗಳಿಂದ ಆವೃತವಾದ ಭೂಪ್ರದೇಶವನ್ನು ಒಳಗೊಂಡಿದೆ. ಕೆನ್ನೇರಳೆ ಸ್ವೆಟ್ಶರ್ಟ್ ಧರಿಸಿರುವ ಬಾಲಕಿಯನ್ನು ಪತ್ತೆಹಚ್ಚಲು ತಿಳಿಸಲಾಗಿದೆ.
ಜೇನು ಬಣ್ಣದ ಕಲ್ಲುಗಳು, ಅನೇಕ ಅಂತರಗಳು ಮತ್ತು ಬಿರುಕುಗಳನ್ನು ಹೊಂದಿರುವುದರಿಂದ, ಸಹಾಯವಿಲ್ಲದೆ ಅವಳನ್ನು ಗುರುತಿಸುವುದು ಸ್ವಲ್ಪ ಕಷ್ಟಕರವಾಗಿದೆ. ಕೆಲವರು ಹುಡುಕಿ ಹುಡುಕಿ ಸುಸ್ತಾಗಿ ಇದೊಂದು ಭ್ರಮೆ, ಫೋಟೋದಲ್ಲಿ ಯಾವುದೇ ಹುಡುಗಿಯಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
ಒಂದು ವೇಳೆ ನೀವು ಅವಳನ್ನು ಇನ್ನೂ ಚಿತ್ರದಲ್ಲಿ ನೋಡಿಲ್ಲದಿದ್ದರೆ, ಇಲ್ಲಿ ಕೆಲವು ಸುಳಿವುಗಳಿವೆ. ಶಾಟ್ನ ಆರಂಭಿಕ ಭಾಗದಲ್ಲಿ ಅವಳು ಒಂದು ಉದ್ದವಾದ, ಚಾಚಿಕೊಂಡಿರುವ ಕಲ್ಲಿನ ಮೇಲೆ ನಿಂತಿದ್ದಾಳೆ. ಅವಳು ಕೂಡ ಉನ್ಮಾದದಿಂದ ಕ್ಯಾಮರಾದತ್ತ ಕೈಬೀಸುತ್ತಿದ್ದಾಳೆ. ನೆಲದ ಮೇಲಿರುವ ಉದ್ದನೆಯ ಕಲ್ಲಿನ ತುಂಡನ್ನು ನೀವು ಝೂಮ್ ಇನ್ ಮಾಡಬೇಕಾಗಿದೆ. ಚಿಕ್ಕ ಹುಡುಗಿ ಕ್ಯಾಮರಾದತ್ತ ಕೈ ಬೀಸುತ್ತಿರುವುದನ್ನು ಕಾಣಬಹುದು.