ವನ್ಯಜೀವಿ ಛಾಯಾಗ್ರಾಹಕರು ಸಾಮಾನ್ಯವಾಗಿ ಸಸ್ಯ ಮತ್ತು ಪ್ರಾಣಿಗಳಿಗೆ ಸಂಬಂಧಿಸಿದ ಕುತೂಹಲಕಾರಿ ಚಿತ್ರಗಳನ್ನು ಹಂಚಿಕೊಳ್ಳುತ್ತಾರೆ ಮತ್ತು ಆಸಕ್ತಿದಾಯಕ ಸವಾಲುಗಳನ್ನು ಪೋಸ್ಟ್ ಮಾಡುವ ಮೂಲಕ ಇಂಟರ್ನೆಟ್ ಬಳಕೆದಾರರ ಬುದ್ಧಿವಂತಿಕೆಯನ್ನು ಪರೀಕ್ಷಿಸುತ್ತಾರೆ.
ಇದೀಗ ವನ್ಯಜೀವಿ ಛಾಯಾಗ್ರಾಹಕ ಹೇಮಂತ್ ದಾಬಿ ಅವರು ಚಿರತೆಯನ್ನು ಕಂಡುಹಿಡಿಯುವ ಸವಾಲನ್ನು ಎಸೆದಿದ್ದಾರೆ. ಈ ಫೋಟೋವನ್ನು ಟ್ವಿಟ್ಟರ್ ಖಾತೆ ‘ಫೇಸಿನೇಟಿಂಗ್’ ಹಂಚಿಕೊಂಡಿದ್ದು, “ಹೇಮಂತ್ ದಾಬಿ ಅವರ ಈ ಫೋಟೋದಲ್ಲಿ ಚಿರತೆ ಇದೆ. ನೀವು ಅದನ್ನು ಹುಡುಕಬಹುದೇ?” ಎಂದು ಬರೆಯಲಾಗಿದೆ.
ಚಿತ್ರದಲ್ಲಿ ಮರದ ತೊಗಟೆ ಮತ್ತು ಮಣ್ಣಿನ ಹಿನ್ನೆಲೆ ಇದೆ. ಇದರಲ್ಲಿ ಚಿರತೆ ಅಡಗಿದೆ. ಇದನ್ನು ಕಂಡುಹಿಡಿಯಲು ಚಿತ್ರವನ್ನು ಅತ್ಯಂತ ಹತ್ತಿರದಿಂದ ನೋಡಬೇಕು. ಕೂಲಂಕುಷವಾಗಿ ಪರಿಶೀಲಿಸಿದಾಗಲೂ ಅನೇಕರು ಚಿರತೆಯನ್ನು ಗುರುತಿಸಲು ಸಾಧ್ಯವಾಗುವುದಿಲ್ಲ.
ಆದಾಗ್ಯೂ, ಕೆಲವು ಹದ್ದಿನ ಕಣ್ಣಿನ ಇಂಟರ್ನೆಟ್ ಬಳಕೆದಾರರು ಅಂತಿಮವಾಗಿ ಮಣ್ಣಿನಲ್ಲಿ ಸಂಪೂರ್ಣವಾಗಿ ಮರೆಮಾಚಿರುವ ಚಿರತೆಯನ್ನು ಗುರುತಿಸಿದ್ದಾರೆ. ನೀವು ಗುರುತಿಸಬಲ್ಲಿರಾ?
https://twitter.com/fasc1nate/status/1605173416721530884?ref_src=twsrc%5Etfw%7Ctwcamp%5Etweetembed%7Ctwterm%5E1605173416721530884%7Ctwgr%5E413d21ba8c3b172c83ad13227c11c461e3f2a0d3%7Ctwcon%5Es1_&ref_url=https%3A%2F%2Fwww.ndtv.com%2Foffbeat%2Finternet-has-been-racking-its-brains-in-trying-to-find-the-hidden-leopard-in-this-photo-3626581
https://twitter.com/ashutoshceo/status/1605187897530818560?ref_src=twsrc%5Etfw%7Ctwcamp%5Etweetembed%7Ctwterm%5E1605187897530818560%7Ctwgr%5E413d21ba8c3b172c83ad13227c11c461e3f2a0d3%7Ctwcon%5Es1_&ref_url=https%3A%2F%2Fwww.ndtv.com%2Foffbeat%2Finternet-has-been-racking-its-brains-in-trying-to-find-the-hidden-leopard-in-this-photo-3626581
https://twitter.com/officialmajorK/status/1605486318896566272?ref_src=twsrc%5Etfw%7Ctwcamp%5Etwee