alex Certify ಚಾಕಲೇಟ್​ಗಳಿಂದ ವಧುವಿನ ಕೇಶವಿನ್ಯಾಸ: ವಿಚಿತ್ರ ವಿಡಿಯೋ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಾಕಲೇಟ್​ಗಳಿಂದ ವಧುವಿನ ಕೇಶವಿನ್ಯಾಸ: ವಿಚಿತ್ರ ವಿಡಿಯೋ ವೈರಲ್​

ಪ್ರತಿಯೊಬ್ಬರೂ ತಮ್ಮ ಮದುವೆಯ ದಿನದಂದು ಉತ್ತಮವಾಗಿ ಕಾಣಬೇಕೆಂದು ಬಯಸುತ್ತಾರೆ. ಅದರಲ್ಲಿಯೇ ವಧು ತನ್ನ ಮದುವೆ ವಿಭಿನ್ನವಾಗಿ ಕಾಣುವಂತೆ ಮಾಡಲು ಯಾವುದೇ ಹಂತಕ್ಕೆ ಹೋಗಬಲ್ಲಳು. ಈ ವೈರಲ್​ ವಧು ಕೂಡ ಅದನ್ನೇ ಮಾಡಲು ಬಯಸಿದ್ದಳು. ಆಕೆಯೀಗ ಸಕ್ಸಸ್​ ಕೂಡ ಆಗಿದ್ದು, ಜಾಲತಾಣದಲ್ಲಿ ವೈರಲ್​ ಆಗಿದ್ದಾಳೆ.

ಕೇಶ ವಿನ್ಯಾಸಕಿಯೊಬ್ಬರು ವಧುವಿನ ಕೂದಲನ್ನು ಹೆಣೆಯುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಷ್ಟಕ್ಕೂ ಈ ಕೇಶವಿನ್ಯಾಸದ ಸ್ಪೆಷಾಲಿಟಿ ಏನು ಎಂದರೆ, ಈಕೆಯ ಜಡೆಗೆ ಹೂವು, ಮುತ್ತುಗಳು, ಹವಳ ಹಾಕಲಿಲ್ಲ. ಬದಲಿಗೆ ಕಿಟ್‌ಕ್ಯಾಟ್, 5 ಸ್ಟಾರ್, ಫೆರೆರೋ ರೋಚರ್ ಮತ್ತು ಮಿಲ್ಕಿ ಬಾರ್‌ನಂತಹ ಚಾಕೊಲೇಟ್‌ಗಳಿಂದ ಅಲಂಕರಿಸಲಾಗಿದೆ.

ಹೌದು, ನೀವು ಕೇಳಿದ್ದು ಸರಿ. ಹೂವುಗಳಿಂದ ಅಲಂಕರಿಸಲ್ಪಟ್ಟ ಕೂದಲನ್ನು ನೀವು ನೋಡಿರಬೇಕು, ಆದರೆ ಈ ಕೇಶ ವಿನ್ಯಾಸವು ಸಂಪೂರ್ಣವಾಗಿ ವಿಶಿಷ್ಟವಾಗಿದೆ. ಅವಳ ಕೂದಲಷ್ಟೇ ಅಲ್ಲ, ಚಾಕೊಲೇಟ್‌ಗಳಿಂದ ಮಾಡಿದ ಕಿವಿಯೋಲೆಗಳು, ಸೊಂಟದ ಪಟ್ಟಿ ಮತ್ತು ನೆಕ್ಲೇಸ್‌ಗಳನ್ನು ಒಳಗೊಂಡಂತೆ ಅವಳ ಆಭರಣಗಳು ಎಲ್ಲವೂ ಚಾಕಲೇಟ್​ಗಳದ್ದು. ಕೆಲವರು ಇದನ್ನು ನೋಡಿ ಸಂತೋಷ ಪಟ್ಟರೆ, ಕೆಲವರು ಇದು ಅಸಹ್ಯ ಎಂದಿದ್ದಾರೆ.

https://www.youtube.com/watch?v=H4K9Ar_oTmU&feature=youtu.be

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...