ಮಾತುಗಳಿಗೆ ನಿಲುಕದ ಮಟ್ಟದ ಕೆಲವೊಂದು ಸ್ನೇಹ ಸಂಬಂಧಗಳನ್ನು ನೋಡುವುದೇ ಸಂತೋಷ. ಝಿಝ್ ಹೆಸರಿನ ನಾಯಿ ಹಾಗೂ ಜೋಜೋ ಹೆಸರಿನ ಡಾಲ್ಫಿನ್ಗಳ ಸ್ನೇಹ ಇಂಥದ್ದೇ ಒಂದಾಗಿದೆ.
2013ರಲ್ಲಿ ತನ್ನ ಮಾಲೀಕರೊಂದಿಗೆ ದೋಣಿಯಲ್ಲಿ ತೆರಳುತ್ತಿದ್ದ ಝಿಝ್ ನಾಯಿ, ಮೊದಲ ಬಾರಿಗೆ ಡಾಲ್ಫಿನ್ ಅನ್ನು ಕಂಡಿದೆ. ಬಹುತೇಕ ನಾಯಿಗಳು ಇದರಿಂದ ಹಿಮ್ಮೆಟ್ಟಿದರೆ, ಝಿಝ್ ಡಾಲ್ಫಿನ್ ಜೊತೆಗೆ ಸ್ನೇಹ ಬೆಳೆಸಿಕೊಂಡಿದೆ.
ಕಳೆದ ಏಳು ವರ್ಷಗಳಿಂದ ಈ ಇಬ್ಬರ ಸ್ನೇಹ ಗಾಢವಾಗಿ ಬೆಳೆದಿದ್ದು, ಇಬ್ಬರೂ ಸೇರಿಕೊಂಡು ಸಾಕಷ್ಟು ಸಮಯ ನೀರಿನಲ್ಲಿ ಈಜಿಕೊಂಡು ಮೋಜು ಮಾಡುತ್ತಾ ಕಳೆಯುತ್ತಿದ್ದಾರೆ.