ಎರಡು ದಶಕಗಳ ಹಿಂದೆಯೇ ಅಳಿದು ಹೋಗಿದೆ ಎನ್ನಲಾದ ’ಝೊಂಬಿ’ ಮೀನೊಂದು ಮತ್ತೆ ಕಂಡು ಬಂದಿದ್ದು, ಜೀವವೈವಿಧ್ಯ ಸಂರಕ್ಷಣಾ ತಜ್ಞರನ್ನೇ ಬೆಚ್ಚಿ ಬೀಳಿಸಿದೆ.
ಆಸ್ಟ್ರೇಲಿಯಾದ ವಿಕ್ಟೋರಿಯಾದ ಕೆರೆಯಲ್ಲಿ ಕಂಡು ಬಂದ ಈ ಮೀನನ್ನು 1998ರಲ್ಲೇ ಅಳಿದು ಹೋಗಿದೆ ಎಂದು ಘೋಷಿಸಲಾಗಿತ್ತು. ಆದರೆ 2019ರಲ್ಲಿ ಕೆರಾಂಗ್‌ನ ಮಿಡ್ಲ್ ರೇಡಿ ಕೆರೆಯಲ್ಲಿ ಝೊಂಬಿ ಮೀನುಗಳು ಕಂಡು ಬಂದಿದ್ದವು. ಇದಾದ ಎರಡು ವರ್ಷಗಳ ಬಳಿಕ ವಿಕ್ಟೋರಿಯಾದ ಅಸಲ್ ಕೆರೆಯೊಂದರಲ್ಲಿ ಸದರ್ನ್ ಪರ್ಪಲ್ ಸ್ಪಾಟೆಡ್ ಗಡ್ಜೆನ್ ಮೀನುಗಳನ್ನು ಪತ್ತೆ ಮಾಡಲಾಗಿದೆ.
ಚಲಿಸುತ್ತಿದ್ದ ಕಾರಿನ ಮೇಲೆಯೇ ಹಾರಿದ ಜಿಂಕೆ..! ವಿಡಿಯೋ ವೈರಲ್
ಇದೀಗ ಝೊಂಬಿ ಮೀನುಗಳ ಸಂಖ್ಯೆ ವರ್ಧಿಸಲು ಕಾರ್ಯಕ್ರಮವೊಂದನ್ನು ವಿಕ್ಟೋರಿಯಾದ ಪರ್ಯಾವರಣ ಹಾಗೂ ಜಲಸಂಪನ್ಮೂಲ ಇಲಾಖೆ ಕೈಗೆತ್ತಿಕೊಂಡಿದೆ.