
ನಾವು ಧರಿಸುವ ಉಡುಪುಗಳಲ್ಲಿ ಫ್ಯಾಶನ್ ಫ್ಯಾಕ್ಟರ್ ಇದ್ದೇ ಇರುತ್ತದೆ. ಇತ್ತೀಚಿನ ದಿನಗಳಲ್ಲಂತೂ ಇದು ವಿಪರೀತ ಎನ್ನುವಂತಾಗಿದೆ.
ಝರಾ’ಸ್ ಅವರ ಹೊಸ ವಿನ್ಯಾಸದ ಸ್ವೆಟರ್ ಒಂದು ಬಿಡುಗಡೆಯಾಗಿದ್ದು, ಈ ಸ್ವೆಟರ್ಗಳು ಕೇವಲ ಕೈಗಳು ಹಾಗೂ ಕತ್ತನ್ನು ಮಾತ್ರವೇ ಬೆಚ್ಚಗಾಗಿಸುತ್ತವೆ. ’ನಿಟ್ ಆರ್ಮ್ ವಾರ್ಮರ್’ ಎಂದು ಕರೆಯಲಾಗುವ ಈ ಧಿರಿಸುಗಳ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಈ ಸ್ಲೀವ್ಗಳ ಬೆಲೆಯು $29.9 ಇದ್ದು , ಭಾರತದಲ್ಲಿ 1,790 ರೂ.ಗಳಿಗೆ ಲಭ್ಯವಾಗುತ್ತವೆ. ವಿಸ್ಕೋಸ್, ಪಾಲಿಸ್ಟರ್ ಹಾಗೂ ನೈಲಾನ್ನಿಂದ ಹೆಣೆಯಲಾದ ಈ ಸ್ವೆಟರ್ಗಳು ಟ್ವಿಟರ್ನಲ್ಲಿ ಸಾಕಷ್ಟು ಹಾಸ್ಯಕ್ಕೆ ಈಡಾಗಿವೆ.