
ಕೊರೋನಾ ಸಾಂಕ್ರಾಮಿಕದ ಪರಿಣಾಮದಿಂದಾಗಿ ತತ್ತರಿಸಿರುವ ಹೋಟೆಲ್ ಉದ್ಯಮದ ನೆರವಿಗೆ ನಿಂತ ಯೂಟ್ಯೂಟರ್ ಒಬ್ಬ, ಸಾವಿರಾರು ಡಾಲರ್ ಗಳನ್ನು ಹೋಟೆಲ್ ನೌಕರರಿಗೆ ಇನಾಮು ಕೊಟ್ಟಿದ್ದಾನೆ.
ಕ್ಸಿಯೋಮಾಎನ್ವೈಸಿ ಎಂದೇ ಹೆಸರು ಪಡೆದಿರುವ ಅಮೆರಿಕಾ ಮೂಲದ ಅರೀಹ್ ಸ್ಮಿತ್, ಚೈನಾ ಟೌನ್ ಹೋಟೆಲ್ ನೌಕರರಿಗೆ ಸಹಾಯ ಮಾಡಬೇಕೆಂದು ನಿಶ್ಚಯಿಸಿದ್ದ. ಇದೇ ವೇಳೆ ಆತನಿಗೆ ಹೊಳೆದ ಉಪಾಯ ಏನೆಂದರೆ, ಕನಿಷ್ಠ ಒಂದು ಸಾವಿರ ಡಾಲರ್ ನಂತೆ ಐದು ಜನರಿಗೆ 5 ಸಾವಿರ ಡಾಲರ್ ಗಳನ್ನು ಟಿಪ್ಸ್ ರೀತಿಯಲ್ಲಿ ಕೊಡಲು ಯೋಚನೆ ಮಾಡಿದ್ದಾನೆ.
ತನ್ನ ಯೂಟ್ಯೂಬ್ ಚಾನಲ್ ನಲ್ಲಿ ಈ ವಿಡಿಯೋ ಹಂಚಿಕೊಂಡಿದ್ದು, ಹೋಟೆಲ್ ಬಳಿ ತೆರಳಿ, ಕೆಂಪು ಬಣ್ಣದ ಮುಚ್ಚಿದ ಲಕೋಟೆ ಕೊಡುತ್ತಾನೆ. ತೆರೆದು ನೋಡಿದರೆ, 1 ಸಾವಿರ ಡಾಲರ್ ನಗದು ಇರುತ್ತದೆ.
ಅನೇಕರು ಒಲ್ಲೆ ಎನ್ನುತ್ತಾರೆ. ಆದರೆ, ಪರಿಸ್ಥಿತಿ ವಿವರಿಸಿ ಹೇಳುವ ಸ್ಮಿತ್, 5 ಸಾವಿರ ಡಾಲರ್ ಗಳನ್ನು ನೀಡುವ ಉದಾರ ಮನೋಭಾವದೊಂದಿಗೆ ಸಾರ್ಥಕತೆ ಮೆರೆಯುತ್ತಾನೆ.