
ವಿಡಿಯೋ ಮೂಲಕ ಅನೇಕರಿಗೆ ಚಾಲೆಂಜ್ ನೀಡೋ ಜಿಮ್ಮಿ ತಾವು ನೀಡಿದ ಟಾಸ್ಕ್ ಪೂರ್ಣಗೊಳಿಸಿದವರಿಗೆ ಸಾವಿರಾರು ಡಾಲರ್ ಮೌಲ್ಯದ ಬಹುಮಾನ ನೀಡ್ತಾರೆ. ಈ ಬಾರಿ ಜಿಮ್ಮಿ ಐ ಊಬರ್ಡ್ ಪೀಪಲ್ & ಪೀಪಲ್ ಗೇವ್ ದೆಮ್ ಎ ಲ್ಯಾಂಬರ್ಗಿನಿ ಎಂಬ ವಿಡಿಯೋ ಹರಿಬಿಟ್ಟು ಪ್ರೇಕ್ಷಕರಿಗೆ ಹೊಸ ಅನುಭವ ನೀಡಿದ್ದಾರೆ.
ಉಬರ್ನಲ್ಲಿ ಡ್ರೈವರ್ ಆಗಿ ಕೆಲಸ ಮಾಡಿದ ಜಿಮ್ಮಿ ತನ್ನ ಕಾರನ್ನ ಬುಕ್ ಮಾಡಿದವರಿಗಾಗಿ ಒಂದು ದೊಡ್ಡ ಸಪ್ರ್ರೈಸ್ ಅನ್ನೇ ಇಟ್ಟಿದ್ರು. ಆದರೆ ಇವರೊಬ್ಬ ಯೂ ಟ್ಯೂಬ್ ಸ್ಟಾರ್ ಅಂತಾ ತಿಳಿಯದ ಅನೇಕರು ಆರಾಮಾಗೇ ಊಬರ್ ಬುಕ್ ಮಾಡಿದ್ದಾರೆ. ಸಾಮಾನ್ಯ ಡ್ರೈವರ್ನಂತೆ ಎಲ್ಲರನ್ನ ಜಿಮ್ಮಿ ಮಾತನಾಡಿಸಿದ್ದಾರೆ ಹಾಗೂ ಕೊನೆಯಲ್ಲಿ ಲ್ಯಾಂಬರ್ಗಿನಿ ಕಾರನ್ನ ಸಹ ಪ್ರಯಾಣಿಕರಿಗೆ ಹಸ್ತಾಂತರಿಸುವ ಮೂಲಕ ಶಾಕ್ ನೀಡಿದ್ದಾರೆ.