ಕೊಟ್ಟು ನೋಡುವ ಸಂತಸವೇ ಬೇರೆಯ ಮಟ್ಟದ್ದು. ಇತ್ತೀಚೆಗೆ ಯೂಟ್ಯೂಬ್‌ನಲ್ಲಿ ಪೋಸ್ಟ್ ಮಾಡಲಾದ ಈ ವಿಡಿಯೋ ಇದೇ ಸಂದೇಶವನ್ನು ಒತ್ತಿ ಹೇಳುತ್ತಿದೆ.
ಬಿಗ್‌ಡಾಸ್‌ಟಿವಿ ಬಿತ್ತರಿಸಿರುವ ಈ ವಿಡಿಯೋದಲ್ಲಿ, ಯೂಟ್ಯೂಬರ್ ಡಾಸ್ ಐವರು ಮಂದಿಯ ಕಾರುಗಳನ್ನು ಖರೀದಿಸಿ, ಅವುಗಳನ್ನು ಅವರಿಗೇ ಮರಳಿಸುವ ಮೂಲಕ ಅವರ ಮೊಗದಲ್ಲಿ ಸಂತಸ ಮೂಡಿಸಿದ್ದಾರೆ.
ಕದ್ದ ವಸ್ತುಗಳನ್ನು ಮ್ಯಾನ್‌ಹೋಲ್‌ನಲ್ಲಿ ಅಡಗಿಸಿಡುತ್ತಿದ್ದ ಭೂಪ
ಹತ್ತು ನಿಮಿಷಗಳ ಈ ವಿಡಿಯೋದಲ್ಲಿ ಡಾಸ್ ಅವರು, ಫೇಸ್ಬುಕ್ ಮಾರ್ಕೆಟ್ ಕ್ರೇಗ್‌ಲಿಸ್ಟ್‌ನಲ್ಲಿ ತಮ್ಮ ಕಾರುಗಳನ್ನು ಮಾರಾಟಕ್ಕೆ ಇಟ್ಟಿದ್ದ ಆರು ಜನರನ್ನು ಭೇಟಿಯಾಗುತ್ತಾರೆ. ಒಮ್ಮೆ ಅವರ ಕಾರುಗಳನ್ನು ಖರೀದಿ ಮಾಡಿದ ಬಳಿಕ ಅವರಿಗೆ ಕಾರುಗಳನ್ನು ವಾಪಸ್ ಕೊಟ್ಟು, ದುಡ್ಡನ್ನೂ ಅವರ ಬಳಿಯೇ ಇಟ್ಟುಕೊಳ್ಳಲು ಸೂಚಿಸುವುದಾಗಿ ಡಾಸ್ ಮೊದಲೇ ಹೇಳುತ್ತಾರೆ. ನಂತರ ಏನಾಗುತ್ತದೆ ಎಂಬುದನ್ನು ನೀವೇ ನೋಡಿ ಆನಂದಿಸಿ.