ಕಳೆದ 20 ವರ್ಷಗಳಿಂದಲೂ ಅಮೆರಿಕನ್ ಪುರುಷರ ಲೈಂಗಿಕ ಆಸಕ್ತಿಯಲ್ಲಿ ಸಾಕಷ್ಟು ಇಳಿಕೆ ಕಂಡುಬರುತ್ತಿದ್ದು, ಕಳೆದ ವರ್ಷದ ಅವಧಿಯಲ್ಲಿ ಅಲ್ಲಿನ ಮೂರನೇ ಒಂದರಷ್ಟು ಪುರುಷರು ಲೈಂಗಿಕ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ ಎಂದು ತಿಳಿದುಬಂದಿದೆ.
ಸಾಮಾಜಿಕ ಜಾಲತಾಣಗಳು ಹಾಗೂ ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಭಾಗಿಯಾಗಿರುವ ಕಾರಣ ಈ ರೀತಿ ಆಗುತ್ತಿದೆ ಎಂದು ಅಂದಾಜಿಸಲಾಗಿದೆ. ಮನೋದೈಹಿಕವಾಗಿ ಉಲ್ಲಾಸಿತರಾಗಿರಲು ಸೆಕ್ಸ್ ಬಹಳ ಮುಖ್ಯವೆಂದು ಅನೇಕ ತಜ್ಞರು ಅಭಿಪ್ರಾಯಪಡುತ್ತಾರೆ.
2000-2018 ಅವಧಿಯಲ್ಲಿ ಮಾಡಲಾದ ಸರ್ವೇಯಲ್ಲಿ, 18-24ರ ವಯೋಮಾನದ ಪುರುಷರಲ್ಲಿ ಪ್ರತಿ ಮೂವರಲ್ಲಿ ಒಬ್ಬರು ಕಳೆದ ವರ್ಷದ ಅವಧಿಯಲ್ಲಿ ಯಾವುದೇ ಲೈಂಗಿಕ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲವೆಂದು ತಿಳಿದುಬಂದಿದೆ. ಇವೇ ವೇಳೆ, 25-34 ವರ್ಷಗಳ ನಡುವಿನ ಮಹಿಳೆಯರಲ್ಲಿಯೂ ಸಹ ಲೈಂಗಿಕ ಚಟುವಟಿಕೆಯಲ್ಲಿ ಇಳಿಕೆ ಕಾಣುತ್ತಿದೆ ಎಂದು ತಿಳಿದುಬಂದಿದೆ.