ನಾವೆಲ್ ಕೊರೋನಾ ವೈರಸ್ ವ್ಯಾಪಕವಾಗಿ ಹರಡಲು ಶುರುವಾಗಿ ಆರು ತಿಂಗಳು ಕಳೆದಿವೆ. ಲಾಕ್‌ಡೌನ್ ಹಾಗೂ ಕ್ವಾರಂಟೈನ್ ನಿಯಮಾವಳಿಗಳಲ್ಲಿ ಸಡಿಲಿಕೆ ತಂದಿದ್ದರೂ ಸಹ ಈ ವೈರಸ್ ಹಾವಳಿ ಇನ್ನೂ ಕಡಿಮೆಯಾದಂತೆ ಕಾಣುತ್ತಿಲ್ಲ.
ಹತ್ತು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಈ ವೈರಸ್‌ನಿಂದ ಬಾಧಿತರಾಗುವ ಸಾಧ್ಯತೆಗಳು ಹೆಚ್ಚಿರುವ ಕಾರಣ ಅನೇಕ ದೇಶಗಳಲ್ಲಿ ಶಾಲೆಗಳ ಬಾಗಿಲುಗಳನ್ನು ಇನ್ನೂ ತೆರೆದಿಲ್ಲ.
ಥಾಯ್ಲೆಂಡ್‌ನ ಬ್ಯಾಂಕಾಕ್‌ನ ವಾಟ್ ಖ್ಲಾಂಗ್ ಟೋಯೆ ಶಾಲೆ ಮತ್ತೆ ಆರಂಭಗೊಂಡಿದ್ದು, ಶಾಲೆಯ 250 ಮಕ್ಕಳಿಗೆ ಅರೆ ಪಾರದರ್ಶಕವಾದ ಕ್ಯೂಬಿಕಲ್‌ಗಳನ್ನು ಮಾಡಿಕೊಡಲಾಗಿದೆ. ಇವುಗಳ ಜೊತೆಗೆ ಸ್ಯಾನಿಟೈಸರ್‌ಗಳು, ತಾಪಮಾನ ಸ್ಕ್ಯಾನರ್ ಗಳು, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮಾರ್ಕರ್‌ಗಳು ಸೇರಿದಂತೆ ಇನ್ನೂ ಹಲವಾರು ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.