ಕೊರೊನಾ ಕರಿಛಾಯೆಯ ನಡುವೆಯೂ ಜಪಾನ್ ನಲ್ಲಿ ಪ್ರತಿವರ್ಷದಂತೆ ಈ ವರ್ಷವೂ ವಯೋಮಾನ ದಿನ ಆಚರಿಸಲಾಯಿತು.
ಯೌವ್ವನಾವಸ್ಥೆಗೆ ಬಂದ ಯುವಕ, ಯುವತಿಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ವಿಶೇಷ. ಕೊರೊನಾ ಕಾರಣದಿಂದ ಪ್ರತಿ ವರ್ಷದಷ್ಟು ವಿಜೃಂಭಣೆ ಇಲ್ಲದಿದ್ದರೂ ಅಲ್ಲಲ್ಲಿ ಕಮಿಂಗ್ ಏಜ್ ಡೇ ಆಚರಣೆಗೆ ವ್ಯವಸ್ಥೆ ಮಾಡಲಾಗಿತ್ತು.
ಸರಿಸುಮಾರು ಕಳೆದ ಒಂದು ವರ್ಷದಿಂದ ಯಾವುದೇ ಕಾರ್ಯಕ್ರಮಗಳಿಲ್ಲದೆ, ಭಣಗುಡುತ್ತಿದ್ದ ಜಪಾನ್ ನ ಹಲವು ಭಾಗಗಳಲ್ಲಿ ಜನವರಿ ತಿಂಗಳ ಎರಡನೇ ಸೋಮವಾರ ಹಬ್ಬದ ವಾತಾವರಣ ಕಳೆಗಟ್ಟಿತ್ತು.
ಇಪ್ಪತ್ತರ ಹರೆಯದ ಯುವಜನಾಂಗ ಬಣ್ಣ ಬಣ್ಣದ ಬಟ್ಟೆ ತೊಟ್ಟು, ಮಾಸ್ಕ್ ಧರಿಸಿ, ಅಗತ್ಯ ಮುಂಜಾಗ್ರತಾ ಕ್ರಮಗಳೊಂದಿಗೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಟೋಕಿಯೋದ ಯೊಕೋಹಾಮದಲ್ಲಿ ಮೇಯರ್ ಫುಮಿಕೋ ಹಯಾಶಿ ಕಾರ್ಯಕ್ರಮ ಆಯೋಜಿಸಿ ಎಲ್ಲರಿಗೂ ಶುಭ ಕೋರಿದರು.