
ಕುಟುಂಬದೊಂದಿಗೆ ಸಮಯ ಕಳೆಯುತ್ತಾ ಪ್ರೀತಿಪಾತ್ರರೊಂದಿಗೆ ಪ್ರತಿಯೊಂದು ಕ್ಷಣವನ್ನೂ ಸವಿಯುವುದು ಯಾವುದೇ ಹಾಲಿಡೇ ಸೀಸನ್‌ನ ವಿಶೇಷತೆ.
ಇದೇ ಥೀಮ್ ಮೇಲೆ ಮಾಡಲಾದ ಭಾವನಾತ್ಮಕ ವಿಡಿಯೋವೊಂದು ವೈರಲ್ ಆಗಿದ್ದು ನೋಡುಗರ ಕಣ್ಣುಗಳಲ್ಲಿ ನೀರು ತರಿಸುತ್ತಿದೆ. ‘Dads with Daughters’ ಹೆಸರಿನ ಟ್ವಿಟರ್ ಪೇಜ್‌ನಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ.
ಕ್ರಿಸ್‌ಮಸ್ ಆಚರಣೆಯ ಮೂಡ್‌ನಲ್ಲಿರುವ ಹಿರಿಯ ವ್ಯಕ್ತಿಯೊಬ್ಬರಿಗೆ ತಮ್ಮ ಮಗಳು ಹಾಗೂ ಮೊಮ್ಮಗಳು ಮನೆಗೆ ಬರುತ್ತಿರುವ ಸಿರಿಯಲ್ಲಿರುವ ಕ್ಷಣಗಳನ್ನು ಈ ವಿಡಿಯೋದಲ್ಲಿ ತೋರಲಾಗಿದೆ.
ಈ ವಿಡಿಯೋವನ್ನು ಉದ್ಯಮಿ ಆನಂದ್ ಮಹಿಂದ್ರಾ ಸಹ ಶೇರ್ ಮಾಡಿಕೊಂಡಿದ್ದಾರೆ. ಇಲ್ಲಿದೆ ನೋಡಿ ಆ ವಿಡಿಯೋ.
https://twitter.com/WithDaughters/status/1338681861506281475?ref_src=twsrc%5Etfw%7Ctwcamp%5Etweetembed%7Ctwterm%5E1338681861506281475%7Ctwgr%5E%7Ctwcon%5Es1_&ref_url=https%3A%2F%2Fwww.timesnownews.com%2Fthe-buzz%2Farticle%2Fyou-made-me-cry-a-viral-christmas-ad-makes-netizens-emotional-even-anand-mahindra-watch%2F695766