ವಿವಿಧ ಚಾಲೆಂಜ್ ಗಳು ಸದಾ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿರುತ್ತವೆ. ಈಗ ಫೋಟೋವೊಂದು ಟ್ವಿಟರ್ ನಲ್ಲಿ ಅಪ್ಲೋಡ್ ಆಗಿದ್ದು, ಅದರಲ್ಲಿ ಹಾವು ಹುಡುಕುವ ಚಾಲೆಂಜ್ ನೀಡಲಾಗಿದೆ. ಅನ್ ಬಿಯರೇಬಲ್ ಡೆನ್ ಎಂಬ ಟ್ವಿಟರ್ ಖಾತೆಯಲ್ಲಿ ಫೋಟೋ ಅಪ್ಲೋಡ್ ಆಗಿದ್ದು, ಕಂದು ಬಣ್ಣದ ಎಲೆಗಳೇ ತುಂಬಿರುವುದು ಮೇಲ್ನೋಟಕ್ಕೆ ಕಾಣುತ್ತದೆ.
ಇದರಲ್ಲಿ ಹಾವೊಂದು ಅಡಗಿಕೊಂಡಿದ್ದು, ಅದನ್ನು 15 ಸೆಕೆಂಡ್ ನಲ್ಲಿ ಹುಡುಕಿ ಎಂದು ಚಾಲೆಂಜ್ ನೀಡಲಾಗಿದೆ. ಹಲವರು ಫೋಟೋದಲ್ಲಿ ಕೆಂಪು ಗುರುತು ಮಾಡಿ ಹಾವಿರುವ ಸ್ಥಳವನ್ನು ಗುರುತಿಸಿ ಕಮೆಂಟ್ ಮಾಡಿದ್ದಾರೆ. ಇನ್ನು ಹಲವರು ಎಲ್ಲಿದೆ ಎಂದು ಗೊತ್ತಾಗುತ್ತಿಲ್ಲ ಎಂದು ಕೈಚೆಲ್ಲಿದ್ದಾರೆ.
ಉತ್ತರ ಅಮೇರಿಕಾ ಭಾಗದಲ್ಲಿ ಸಾಮಾನ್ಯವಾಗಿರುವ ಕೋಪರ್ ಹೆಡೆಯ ಹಾವಿನ ಫೋಟೋ ಇದಾಗಿದೆ. ಇವು ಕಿತ್ತಳೆ, ಗುಲಾಬಿ ಅಥವಾ ಅಲ್ಪ ಕಂದು ಬಣ್ಣದಲ್ಲಿ ಇರುತ್ತವೆ. ಒಣಗಿ ಕಂದು ಬಣ್ಣಕ್ಕೆ ತಿರುಗಿ ಎಲೆಗಳ ಸಂದಿನಲ್ಲಿ ಇರುತ್ತವೆ. ಅಲ್ಲಿದ್ದ ಅವುಗಳನ್ನು ಗುರುತಿಸುವುದು ಕಷ್ಟ ಎಂಬುದು ಪೆನಸ್ಲೇವಿಯನ್ ರಾಜ್ಯ ವಿವಿಯ ತಜ್ಞರ ಅಭಿಪ್ರಾಯ.
https://twitter.com/dm_ynwa/status/1279312734824218631?ref_src=twsrc%5Etfw%7Ctwcamp%5Etweetembed%7Ctwterm%5E1279312734824218631%7Ctwgr%5E&ref_url=https%3A%2F%2Fwww.ndtv.com%2Foffbeat%2Fyou-have-15-seconds-to-find-the-snake-in-this-pic-ready-steady-go-2261179