ಸಿಕ್ಕಾಪಟ್ಟೆ ರಿಂಕ್ಲಿ ಚರ್ಮವಿದ್ದ ನಾಯಿಯೊಂದಕ್ಕೆ ತನ್ನ ಕಣ್ಣುಗಳನ್ನೂ ಮುಚ್ಚಿಕೊಳ್ಳುವ ಮಟ್ಟದಲ್ಲಿ ಅತಿಯಾದ ಚರ್ಮವಿದ್ದ ಕಾರಣ ಕಿರಿಕಿರಿ ಅನುಭವಿಸುತ್ತಿತ್ತು. ನೆಪೊಲಿಟನ್ ಮಾಸ್ತಿಫ್ ತಳಿಯ ರಿಯೋ ಎಂಬ ಹೆಸರಿನ ಈ ಶ್ವಾನಕ್ಕೆ ಮುಖದ ತುಂಬಾ ವಿಪರೀತ ನೆರಿಗೆಗಳಿವೆ.
ನಿಯೋನನ್ನು ಸಾಕಿಕೊಂಡಿರುವ ಮಾರ್ಕ್ ಹಚಿನ್ಸ್ ಆತನಿಗೊಂದು ಫೇಸ್ ಲಿಫ್ಟ್ ಕೊಟ್ಟಿದ್ದು, ಸರ್ಜರಿ ಮೂಲಕ ಅಧಿಕವಾಗಿದ್ದ ಚರ್ಮವನ್ನು ತೆಗೆಸಿಹಾಕಿದ್ದಾರೆ. ನಿಯೋನ ದೇಹದಿಂದ ಕೆಜಿಗೂ ಹೆಚ್ಚು ಅಧಿಕ ಚರ್ಮವನ್ನು ವೈದ್ಯರು ತೆಗೆದುಹಾಕಿದ್ದಾರೆ.
ಶಸ್ತ್ರಚಿಕಿತ್ಸೆಯಿಂದ ನಿಯೋ ಚೆನ್ನಾಗಿ ಚೇತರಿಸಿಕೊಂಡಿದ್ದು, ಹಚಿನ್ಸ್ ಬಹಳ ಖುಷಿಯಿಂದ ಇದ್ದಾರೆ. ಮುಂದಿನ ದಿನಗಳಲ್ಲಿ ಆತ ಆರಾಮವಾಗಿ ತನ್ನ ಸುತ್ತಲಿನ ಜಗತ್ತನ್ನು ನೋಡಿಕೊಂಡು ಓಡಾಡಬಹುದಾಗಿದೆ.