alex Certify ಐಶಾರಾಮಿ ಕಾರಿನ ಪಾರ್ಕಿಂಗ್‌ ವೇಳೆ ಎಡವಟ್ಟು: ಸಿಸಿ ಟಿವಿ ದೃಶ್ಯಾವಳಿ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಐಶಾರಾಮಿ ಕಾರಿನ ಪಾರ್ಕಿಂಗ್‌ ವೇಳೆ ಎಡವಟ್ಟು: ಸಿಸಿ ಟಿವಿ ದೃಶ್ಯಾವಳಿ ವೈರಲ್

ಪೋರ್ಷೆ ಟೈಕಾನ್ ಐಶಾರಾಮಿ ಕಾರು ಚಾಲಕನೊಬ್ಬ ಚಾಲನೆ ವೇಳೆ ನಿಯಂತ್ರಣ ಕಳೆದುಕೊಂಡು ಕಾಂಪೌಂಡ್ ಹಾಗೂ ಇನ್ನೊಂದು ಕಾರಿಗೆ ಡಿಕ್ಕಿ ಹೊಡೆದ ವಿಡಿಯೋವೊಂದು ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

ಎಸ್ಸೆಕ್ಸ್ ಮೆನ್ನಿಂಗ್ಟನ್ ಎಂಬಲ್ಲಿ ಈ ಘಟನೆ ನಡೆದಿದೆ. ಅಪಘಾತದ ಸಿಸಿಟಿವಿ ಫೂಟೇಜ್ ವೈರಲ್ ಆಗಿದೆ.‌ ಗುಡ್ಡ ಪ್ರದೇಶದಲ್ಲಿ ಮನೆಗಳ ಎದುರು ತಿರುವು ಮುರುವಿನ ರಸ್ತೆ ಇದೆ. ಅಲ್ಲಲ್ಲಿ ಕಾರುಗಳನ್ನು ನಿಲ್ಲಿಸಲಾಗಿದೆ. ಐಶಾರಾಮಿ ಪೋರ್ಷೆ ಟೈಕಾನ್ ಬ್ರ್ಯಾಂಡ್ ನ್ಯೂ ಕಾರನ್ನು ರಸ್ತೆಯ ಪಕ್ಕದಲ್ಲಿ ಪಾರ್ಕ್ ಮಾಡಲು ಮುಂದಾದ ಚಾಲಕ ನಿಯಂತ್ರಣ ಕಳೆದುಕೊಳ್ಳುತ್ತಾನೆ.

ಕಾರು ಎತ್ತರದ ರಸ್ತೆಯಿಂದ ಕೆಳಗೆ ಜಿಗಿದು ಅಲ್ಲಿ ನಿಲ್ಲಿಸಿಟ್ಟ ಎಸ್ಯುವಿ ಕಾರಿನ ಮೇಲೆ ಅರ್ಧ ಹತ್ತಿ ನಿಲ್ಲುತ್ತದೆ. ಅತ್ತಿತ್ತ ಜನ ಓಡಿ ಬರುತ್ತಾರೆ. ಚಾಲಕನಿಗೆ ಸಣ್ಣಪುಟ್ಟ ಗಾಯವಾಗಿದೆ. ರಿಕವರಿ ಟ್ರಕ್ ತರಿಸಿ ಕಾರನ್ನು ಎಳೆದು ತೆಗೆಯಲಾಗಿದೆ.

https://twitter.com/oldschoolbiker4/status/1329538400387534849?ref_src=twsrc%5Etfw%7Ctwcamp%5Etweetembed%7Ctwterm%5E1329538400387534849%7Ctwgr%5E&ref_url=https%3A%2F%2Fwww.timesnownews.com%2Fthe-buzz%2Farticle%2Fworst-parking-fail-porsche-drives-over-wall-and-lands-on-suv-video-goes-viral-watch%2F684901

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...