ಯೂರೋಪಿನ ಸಂಶೋಧಕರ ತಂಡವೊಂದು ಜಗತ್ತಿನ ಅತ್ಯಂತ ಸಣ್ಣ ಅಲ್ಟ್ರಾಸೌಂಡ್ ಡಿಟೆಕ್ಟರ್ ಅನ್ನು ಅಭಿವೃದ್ಧಿಪಡಿಸಿದೆ. ಸಿಲಿಕಾನ್ ಚಿಪ್ ಮೇಲೆ ಪುಟಾಣಿ ಫೊಟಾನ್ ಸರ್ಕ್ಯೂಟ್ ಗಳನ್ನು ಹೊಂದಿರುವ ಈ ಡಿಟೆಕ್ಟರ್ ಮಾನವನ ಸರಾಸರಿ ಕೂದಲಿಗಿಂತ 100 ಪಟ್ಟು ಸಣ್ಣದಾಗಿದೆ.
ಈ ಸಾಧನದಿಂದ ಅತ್ಯಂತ ಸಣ್ಣ ವಸ್ತುಗಳ ಸೂಪರ್ ರೆಸಲ್ಯೂಷನ್ ಚಿತ್ರಗಳನ್ನು ಸೆರೆ ಹಿಡಿಯಬಹುದು ಎಂದು ಜರ್ಮನಿಯ ಮ್ಯೂನಿಕ್‌ನ ಹೆಲ್ಮೋಲ್ಟ್ಝ್ ಝೆಂಟ್ರಮ್ ಮಂಕೆನ್ ತಾಂತ್ರಿಕ ವಿವಿಯ ತಂಡ ತಿಳಿಸಿದೆ.
ರಕ್ತದ ಕಣಕ್ಕಿಂತ ಚಿಕ್ಕದಾದ ಡಿಟೆಕ್ಟರ್ ಒಂದನ್ನು ಇದೇ ಮೊದಲ ಬಾರಿಗೆ ಅಲ್ಟ್ರಾಸೌಂಡ್ ಪತ್ತೆ ಮಾಡಲು ಬಳಸಲಾಗುತ್ತಿದೆ ಎಂದು ಸಿಲಿಕಾನ್ ಚಿಪ್ ತಜ್ಞ ರಾಮಿ ಶ್ನಾಯ್ಡರ್ಮನ್ ತಿಳಿಸಿದ್ದಾರೆ.