ಬಿಡುವಿನ ವೇಳೆ ಕಳೆಯಲು ಇರುವ ಅತ್ಯಂತ ಜನಪ್ರಿಯ ಐಡಿಯಾಗಳಲ್ಲಿ ಒಂದು ಈ ರುಬಿಕ್ ಕ್ಯೂಬ್. ಜಗತ್ತಿನಾದ್ಯಂತ ಕೋಟಿಗಟ್ಟಲೇ ಜನರು ಈ ಕ್ಯೂಬ್ ಜೊತೆಗೆ ಆಟವಾಡುತ್ತಾರೆ.
ಇಂಥ ರುಬಿಕ್ ಕ್ಯೂಬ್ ಕಂಡುಹಿಡಿದ 40ನೇ ವರ್ಷಾಚರಣೆಯ ಪ್ರಯುಕ್ತ ಜಪಾನ್‌ನಲ್ಲಿ ಜಗತ್ತಿನ ಅತಿ ಸಣ್ಣದಾದ ರುಬಿಕ್ ಕ್ಯೂಬ್ ಅನ್ನು ತಯಾರಿಸಲಾಗಿದೆ. ಇಲ್ಲಿರುವ ಹಂಗೆರಿ ದೇಶದ ರಾಯಭಾರ ಕಾರ್ಯಾಲಯದಲ್ಲಿ ಈ ಕ್ಯೂಬ್ ಅನ್ನು ಪ್ರದರ್ಶನಕ್ಕೆ ಇಡಲಾಗಿದೆ.
ಬೆರಳ ತುದಿಯಲ್ಲಿ ಕೂರಬಲ್ಲ ಇದರ ಆಯಾಮಗಳು ಇಂತಿವೆ: 9.9mm x 9.9mm x 9.9mm. ಇದರ ತೂಕ ಬರೀ 2 ಗ್ರಾಂ ಇದೆ. ಮೆಗಾ ಹೌಸ್ ಕಾರ್ಪೋರೇಷನ್ ಈ ಕ್ಯುಬಿಕ್ ಅಭಿವೃದ್ಧಿಪಡಿಸಿದೆ. ಅದಾಗಲೇ ಇಂಥ ಕ್ಯೂಬಿಕ್‌ಗಳಿಗೆ ಆರ್ಡರ್‌ಗಳು ಹರಿದುಬರುತ್ತಿದೆ. ಕೇವಲ ಕ್ರೆಡಿಟ್ ಕಾರ್ಡ್‌ದಾರರು ಮಾತ್ರವೇ ಇದನ್ನು ಖರೀದಿ ಮಾಡಬಹುದು ಎನ್ನಲಾಗಿದೆ.